News Karnataka Kannada
Saturday, April 13 2024
Cricket
ಬೀದರ್

ರಾಂಗ್‌ ಸೈಡ್‌ ಚಾಲನೆ ಮಾಡಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಆರೋಪಿಗೆ 1ವರ್ಷ ಶಿಕ್ಷೆ

Courtorder
Photo Credit :

ಹುಮನಾಬಾದ:  ರಾಂಗ್‌ ಸೈಡ್‌ ನಲ್ಲಿ  ಟಿಪ್ಪರ್‌ ಚಾಲನೆ ಮಾಡಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಆರೋಪಿಗೆ ಒಂದು ವರ್ಷ ಶಿಕ್ಷೆ ಹಾಗೂ 1500 ರೂ. ದಂಡ ವಿಧಿಸಿ ಹಿರಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಸರಸ್ವತಿದೇವಿ ಆದೇಶ ನೀಡಿದ್ದಾರೆ.

ನಿಷ್ಕಾಳಜಿತನದಿಂದ ವಾಹನ ಚಾಲನೆ ಮಾಡಿದ ಆರೋಪಿ ಲಖನರೆಡ್ಡಿ ಮಾಣಿಕರೆಡ್ಡಿ ಎಡ್ಲಾ ಶಿಕ್ಷೆಗೆ ಗುರಿಯಾಗಿದ್ದಾನೆ.

ರಾಷ್ಟ್ರೀಯ ಹೆದ್ದಾರಿ 65ರ ಹುಡಗಿ ಸೇತುವೆ ಹತ್ತಿರದ ಹುಡಗಿ ನಂದಗಾಂವ ರಸ್ತೆಯಲ್ಲಿ ಟಿಪ್ಪರ್‌ನ್ನು ರಾಂಗ್‌ ಸೈಡ್‌ ಚಾಲನೆ ಮಾಡಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಾಜೇಶ್ವರ ಮೂಲದ ಶಿವಾನಂದ ಹಡಪದ ಮೃತಪಟ್ಟಿದ್ದನು.

ಪ್ರಕರಣದ ಕುರಿತು ಅಂದಿನ ಸಿಪಿಐ ಜೆ.ಎಸ್‌. ನ್ಯಾಮರಗೌಡರ್‌ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದು, ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರವಿಕುಮಾರ ಹಣಮಂತ ವಾದ ಮಂಡಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು