News Karnataka Kannada
Monday, April 15 2024
Cricket
ಬಳ್ಳಾರಿ

ಕಾಂಗ್ರೆಸ್​​ ಶಾಸಕ ನಾರಾಭರತ್ ರೆಡ್ಡಿ ಮನೆ ಮೇಲೆ ಇಡಿ ದಾಳಿ: ನೋಟಿನ ಬ್ಯಾಗ್ ಪತ್ತೆ

ಇಂದು ಬೆಳಗಿನ ಜಾವ ಇಡಿ ಅಧಿಕಾರಿಗಳು ಬಳ್ಳಾರಿ ನಗರದ ಕಾಂಗ್ರೆಸ್​​ ಶಾಸಕ ನಾರಾಭರತ್ ರೆಡ್ಡಿ ಮನೆ, ಕಚೇರಿ ಸೇರಿ ಒಟ್ಟು 4 ಕಡೆ ರೇಡ್ ಮಾಡಿದ್ದರು.
Photo Credit : News Kannada

ಬಳ್ಳಾರಿ: ಇಂದು ಬೆಳಗಿನ ಜಾವ ಇಡಿ ಅಧಿಕಾರಿಗಳು ಬಳ್ಳಾರಿ ನಗರದ ಕಾಂಗ್ರೆಸ್​​ ಶಾಸಕ ನಾರಾಭರತ್ ರೆಡ್ಡಿ ಮನೆ, ಕಚೇರಿ ಸೇರಿ ಒಟ್ಟು 4 ಕಡೆ ರೇಡ್ ಮಾಡಿದ್ದರು.

ನಾರಾ ಭರತ್ ರೆಡ್ಡಿಯ ತಂದೆಯ ಕಚೇರಿಯಲ್ಲಿ 500 ನೋಟುಗಳಿರುವ ಬ್ಯಾಗ್​ ಅನ್ನು ಇಡಿ ಅಧಿಕಾರಿಗಳು ಹೊರ ತಂದಿದ್ದಾರೆ.  ಅಧಿಕಾರಿಗಳ ಕೈಗೆ ಸದ್ಯ ಹಣ ತುಂಬಿದ ಬ್ಯಾಗ್ ಸಿಕ್ಕಿದೆ.

ಬೆಂಗಳೂರಿನಿಂದ ಆಗಮಿಸಿದ್ದ ಅಧಿಕಾರಿಗಳ 4 ತಂಡಗಳು ಶಾಸಕರ ತಂದೆ, ಚಿಕ್ಕಪ್ಪ ಪ್ರತಾಪ್ ರೆಡ್ಡಿ ಅವರ ಮನೆ, ಕಚೇರಿ ಮೇಲೆ ಇಂದು ಬೆಳಗ್ಗೆ 6:30ರಿಂದ ತಲಾಶ್ ನಡೆಸುತ್ತಿದ್ದಾರೆ.

ಶಾಸಕರ ಕುಟುಂಬ ಗ್ರಾನೈಟ್ ಬಿಸಿನೆಸ್ ಮಾಡುತ್ತಿದ್ದಾರೆ. ಹೀಗಾಗಿ ಇ.ಡಿ ಅಧಿಕಾರಿಗಳು ಶಾಸಕರ ಮನೆಯಲ್ಲಿ ತೀವ್ರವಾದ ಶೋಧ ನಡೆಸಿದ್ದು ಅವರ ಸಂಬಂಧಿಗಳ ಮನೆ ಮೇಲೂ ದಾಳಿ ನಡೆಸಿದ್ದಾರೆ.

20 ಅಧಿಕಾರಿಗಳು ಶಾಸಕರಿಗೆ ಸಂಬಂಧ ಪಟ್ಟ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದು ಶಾಸಕರ ತಂದೆ ಕಚೇರಿಯಲ್ಲಿ ಲಕ್ಷಾಂತರ ರೂಪಾಯಿಗಳು ಪತ್ತೆಯಾಗಿವೆ. 500 ರೂಪಾಯಿಗಳ ನೋಟು ಇರುವ ಬ್ಯಾಗ್ ಅಧಿಕಾರಿಗಳ ಕೈಗೆ ಸಿಕ್ಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು