News Karnataka Kannada
Thursday, April 18 2024
Cricket
ಕಲಬುರಗಿ

ಹೆಚ್ಚುತ್ತಿರುವ ಅಪರಾಧ ಕೃತ್ಯ: 4 ವರ್ಷಗಳಲ್ಲಿ 952 ಕೊಲೆ ಪ್ರಕರಣ

Police (1)
Photo Credit : News Kannada

ಕಲಬುರಗಿ: ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ವಲಯದ ಪ್ರಗತಿಪಥದಲ್ಲಿ ಇನ್ನೂ ಮಂದಗತಿಯಲ್ಲೇ ಸಾಗುತ್ತಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅಪರಾಧ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಕೊಲೆ ಪ್ರಕರಣಗಳು ಮೇಲಿಂದ ಮೇಲೆ ‘ಸದ್ದು’ ಮಾಡುತ್ತಿವೆ.ವರ್ಷದಿಂದ ವರ್ಷಕ್ಕೆ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕ್ಷುಲ್ಲಕ ಕಾರಣಕ್ಕೂ ಕೊಲೆ ಮಾಡುವುದು ಈ ಭಾಗದಲ್ಲಿ ಸಾಮಾನ್ಯವೆಂಬಂತಾಗಿದೆ. ಮಾತುಕತೆ ಅಥವಾ ರಾಜಿ ಮೂಲಕ ಬಗೆಹರಿಸಿಕೊಳ್ಳಬಹುದಾದ ವಿಷಯಗಳಿಗೂ ‘ಕೊಲೆ’ ಎಂಬುವುದೇ ದೊಡ್ಡ ‘ಸಾಧನ’ ಎಂಬಂತಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕೊಲೆಗಳೇ ಇದಕ್ಕೆ ಸಾಕ್ಷಿ.

ಜಿಲ್ಲೆಯಲ್ಲಿ ಈಚೆಗೆ ನಡೆದ ಆಳಂದ ತಾಲ್ಲೂಕಿನ ಸರಸಂಬಾ ಗ್ರಾಮದ ಬಿಜೆಪಿ ಮುಖಂಡ ಮಹಾಂತಪ್ಪ ‌ಸಿದ್ದರಾಮಪ್ಪ ಆಲೂರೆ ಕೊಲೆ ಹಾಗೂ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ಅವರ ಆಪ್ತ, ಅಫಜಲಪುರ ತಾಲ್ಲೂಕಿನ ಸಾಗನೂರು ಗ್ರಾಮದ ಗಿರೀಶ್‌ಬಾಬು ಚಕ್ರ ಹತ್ಯೆ ಪ್ರಕರಣಗಳು ರಾಜಕೀಯವಾಗಿ ಮಹತ್ವ ಪಡೆದುಕೊಳ್ಳುತ್ತಿದೆ. ಹಂತಕರ ಅಟ್ಟಹಾಸದಿಂದಾಗಿ ಕುಖ್ಯಾತಿಗೆ ಒಳಗಾಗಿದ್ದ ಭೀಮಾ ತೀರದ ಪ್ರದೇಶವು ಇದೀಗ ಮತ್ತೆ ಸುದ್ದಿಯಾಗುತ್ತಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಹಾಗೂ ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ (ಎಸ್‌ಬಿಆರ್‌ಬಿ) ವರದಿಗಳ ಪ್ರಕಾರ 2020ರಿಂದ 2023ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 5,373 ಕೊಲೆ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಕಲ್ಯಾಣ ಕರ್ನಾಟಕವ್ಯಾಪ್ತಿಯ ಏಳು ಜಿಲ್ಲೆಗಳಲ್ಲೇ 952 (ಶೇ 17.71) ಕೊಲೆ ಪ್ರಕರಣಗಳು ದಾಖಲಾಗಿವೆ.

ಎನ್‌ಸಿಆರ್‌ಬಿ ವರದಿಯನ್ನು ಅವಲೋಕಿಸಿದಾಗ ರಾಜ್ಯ ಹಾಗೂ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕೊಲೆ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಕಂಡುಬಂದಿದೆ. 2020ರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 220 ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ 232 ಹಾಗೂ 2022ರಲ್ಲಿ 258 ಪ್ರಕರಣಗಳು ದಾಖಲಾಗಿವೆ. ಎಸ್‌ಸಿಆರ್‌ಬಿ 2023ರಲ್ಲಿ ನೀಡಿದ ಪ್ರತಿ ತಿಂಗಳ ವರದಿಯನ್ನು ಕ್ರೋಡೀಕರಿಸಿದಾಗ 242 ಕೊಲೆ ಪ್ರಕರಣ ದಾಖಲಾಗಿರುವುದು ಕಂಡುಬಂದಿದೆ. ಮೊದಲು ಕೊಲೆ ಯತ್ನದ ಪ್ರಕರಣ ದಾಖಲಾಗಿದ್ದರೂ, ಸಂತ್ರಸ್ತರು ಸಾವನ್ನಪ್ಪಿದಾಗ ಕೊಲೆ ಪ್ರಕರಣವಾಗಿ ಮಾರ್ಪಡುತ್ತವೆ. ಪರಿಗಣನೆಗೆ ತೆಗೆದುಕೊಂಡರೆ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು