ಕಲಬುರಗಿ: ಅಷ್ಟ ತೀರ್ಥದಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಬಾಲಕರು ನದಿ ಪಾಲಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗಾಣಪುರುದಲ್ಲಿ ನಡೆದಿದೆ. ಗಾಣಗಾಪುರದ ಸಂಗಮದ ಅಷ್ಟ ತೀರ್ಥದಲ್ಲಿ ಸ್ನಾನ ಮಾಡುವಾಗ ಈ ದುರ್ಘಟನೆ ನಡೆದಿದ್ದು, ಪ್ರಕಾಶ್ (15) ಮತ್ತು ಸೋನು (16) ಎಂಬ ಬಾಲಕರು ಕೊನೆಯುಸಿರೆಳೆದಿದ್ದಾರೆ.
ಕೂಡಲೇ ಪ್ರಕಾಶ್ ಆತನನ್ನ ಕಾಪಾಡಲು ಮುಂದಾಗಿದ್ದ. ಈ ವೇಳೆ ಇವನು ನದಿಯಲ್ಲಿ ಬಿದ್ದು ನೀರು ಪಾಲಾಗಿದ್ದಾನೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಎಸ್ಡಿಆರ್ಎಫ್ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Ad