Bengaluru 23°C
Ad

ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಮಕ್ಕಳನ್ನು ಬರಮಾಡಿಕೊಂಡ ಎಸ್.ಡಿ.ಎಮ್.ಸಿ ಅಧ್ಯಕ್ಷ ಹೂವಣ್ಣ ಕರಗೂಳಿ

ರಾಜ್ಯಾದ್ಯಂತ ಇಂದಿನಿಂದ ಸರಕಾರಿ ಶಾಲೆಗಳು ಪ್ರಾರಂಭವಾಗಿದ್ದು, ಶಾಲಾ ಮಕ್ಕಳಲ್ಲಿ ಹರ್ಷುವುಂಟು ಮಾಡಿದೆ. ಬೇಸಿಗೆ ರಜೆ ಮುಗಿಸಿ ಶಾಲೆಗೆ ಹೊಸ ಉತ್ಸಹದಿಂದ ಮಕ್ಕಳು ಬರಲು ಎಸ್‌.ಡಿ.ಎಮ್.ಸಿ ಅಧ್ಯಕ್ಷ ಹೂವಣ್ಣಾ ಕರಗೂಳಿ ಅವರು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ರಂಗೋಲಿ ಹಾಕಿ ಮಕ್ಕಳಿಗೆ ಸಿಹಿ ನೀಡುವ ಮುಖಾಂತರ ಮಕ್ಕಳನ್ನು ಬರಮಾಡಿಕೊಂಡರು.

ಅಫಜಲಪುರ: ರಾಜ್ಯಾದ್ಯಂತ ಇಂದಿನಿಂದ ಸರಕಾರಿ ಶಾಲೆಗಳು ಪ್ರಾರಂಭವಾಗಿದ್ದು, ಶಾಲಾ ಮಕ್ಕಳಲ್ಲಿ ಹರ್ಷುವುಂಟು ಮಾಡಿದೆ. ಬೇಸಿಗೆ ರಜೆ ಮುಗಿಸಿ ಶಾಲೆಗೆ ಹೊಸ ಉತ್ಸಹದಿಂದ ಮಕ್ಕಳು ಬರಲು ಎಸ್‌.ಡಿ.ಎಮ್.ಸಿ ಅಧ್ಯಕ್ಷ ಹೂವಣ್ಣಾ ಕರಗೂಳಿ ಅವರು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ರಂಗೋಲಿ ಹಾಕಿ ಮಕ್ಕಳಿಗೆ ಸಿಹಿ ನೀಡುವ ಮುಖಾಂತರ ಮಕ್ಕಳನ್ನು ಬರಮಾಡಿಕೊಂಡರು.

ನಂತರ ಮಾತನಾಡಿದ ಅಧ್ಯಕ್ಷ ಹೂವಣ್ಣಾ ಕರಗೂಳಿ ಸರಕಾರಿ ಶಾಲೆಗಳು ಬೆಳೆಸುವ ಕರ್ತವ್ಯ ಮತ್ತು ಜವಾಬ್ದಾರಿ ನಮ್ಮ ಗ್ರಾಮೀಣ ಮಟ್ಟದ ಜನರಲ್ಲಿದೆ ಹೊರತು ನಗರಗಳಲಿಲ್ಲ.ಕರ್ನಾಟಕದ ಅತ್ತ್ಯುನ್ನತ ಸರಕಾರಿ ಹುದ್ದೆಗಳನ್ನು ಮುಡಿಗೆರಿಸಿಕೊಂಡ ಕೀರ್ತಿ ಸರಕಾರಿ ಶಾಲೆಗಳಿಗೆ ಸಲ್ಲುತ್ತದೆ.

ತಾಲೂಕಿನ ಎಲ್ಲಾ ಗ್ರಾಮಗಳಿಗೆ ಹೊಲಿಸಿದರೆ ಮಲ್ಲಾಬಾದ ಗ್ರಾಮದ ಸರಕಾರಿ ಶಾಲೆಯ ವ್ಯವಸ್ಥೆ ಮತ್ತು ಸರಕಾರಿ ಶಾಲೆಯಲ್ಲಿನ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ನಮ್ಮ ಶಾಲೆಯ ಶಿಕ್ಷಕರು ಮಕ್ಕಳಿಗೆ ಭೋಧನೆ ಮಾಡುವ ರೀತಿ ಯಾವುದೇ ಅರೆ ಸರಕಾರಿ ಶಾಲೆಗಳಿಗೆ ಕಡಿಮೆ ಇಲ್ಲ. ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸಾವಿರಾರು ರೂಪಾಯಿ ಖರ್ಚು ಮಾಡಿ ಶಾಲೆಗೆ ಕಳುಹಿಸುವ ಈ ಕಾಲದಲ್ಲಿ ಸರಕಾರಿ ಶಾಲೆಗಳು ಉತ್ತಮವಾಗಿ ಬೆಳೆಯುತ್ತಿರುವುದಕ್ಕೆ ಸರಕಾರಿ ಶಾಲಾ ಶಿಕ್ಷಕರೇ ಕಾರಣ ಎಂದು ಹೇಳಬಹುದು.ಅದರಷ್ಟೆ ಪಾತ್ರವನ್ನು ಗ್ರಾಮೀಣ ಭಾಗದ ಪಾಲಕ ಪೋಷಕರು ಉತ್ಸಾಹ ತೋರಿಸುತ್ತಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಶ ಜಮಾದಾರ ದೇಶದಲ್ಲಿ ಶಾಲೆಯ ಗಂಟೆ ಎಲ್ಲೆಲ್ಲಿ ಹೆಚ್ಚಾಗಿ ಬಾರಿಸುತ್ತದೆಯೋ ಅಲ್ಲಿ ಮೌಢ್ಯತೆಗೆ ಅವಕಾಶ ಇರುವುದಿಲ್ಲ.ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದು ಅರ್ಥ. ಕರ್ನಾಟಕದ ಪ್ರತಿಯೊಂದು ಗ್ರಾಮಗಳಲ್ಲಿ ಸರಕಾರಿ ಶಾಲೆಗಳು ಇವೆ.

ಆದರೆ ಕ್ರಮೇಣವಾಗಿ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ದುಖಕರ ಸಂಗತಿಯಾಗಿದೆ. ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕೆಲಸ ನಾವು ನೀವುಗಳು ಮಾಡಬೇಕು ಎಂದರು. ಶಾಲೆಗೆ ಬೇಕಾದ ಪೂರಕ ವ್ಯವಸ್ಥೆಯನ್ನು ನಾನು ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿ ಮಕ್ಕಳಿಗೆ ಶಾಲೆಗೆ ಸ್ವಾಗತಿಸಿದರು.ಸರಸ್ವತಿ ಪೋಟೋ ಪೂಜೆ ಜೊತೆಗೆ ಎಲ್.ಕೆ.ಜಿ.ಯು.ಕೆ.ಜಿ ಇಂಗ್ಲಿಷ್ ಮಾಧ್ಯಮ ಶಾಲೆಯ ಉದ್ಘಾಟನೆ ನಡೆಯಿತು.ಮಕ್ಕಳಿಗೆ ಹೂವಗಳನ್ನು ಹಾಕುವ ಮುಖಾಂತರ ಗಣ್ಯರಿಂದ ಬರಮಾಡಿಕೊಳ್ಳಲಾಯಿತು.

ಇದೇ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಲಕ್ಕಪ್ಪ ಮ್ಯಾಕೇರಿ, ರವಿ ಬಡದಾಳ, ಮಾಳಪ್ಪ ಜಮಾದಾರ, ಸಿದ್ದು ಜಮಾದಾರ, ಲಕ್ಷ್ಮಣ ದೊಡ್ಮನಿ, ಸತೀಶ ಜಮಾದಾರ ಸೇರಿದಂತೆ ಪಾಲಕರು ಪೋಷಕರು ಉಪಸ್ಥಿತರಿದ್ದರು, ಶಂಭುಲಿಂಗ ಜಗದಿ ಕಾರ್ಯಕ್ರಮ ನಿರೂಪಿಸಿದರು.

Ad
Ad
Nk Channel Final 21 09 2023
Ad