Ad

ಚಾಕುವಿನಿಂದ ಇರಿದು ನಂತರ ಮರಕ್ಕೆ ನೇತು ಹಾಕಿ ವ್ಯಕ್ತಿಯ ಕೊಲೆ

ಚಾಕುವಿನಿಂದ ಇರಿದು ಆಟೋ ಚಾಲಕನ ಬರ್ಬರ ಹತ್ಯೆ ನಡೆಸಲಾಗಿದೆ. ಗೋಪಾಲ್ ಜಾಧವ್ (48) ಮೃತಪಟ್ಟವನು. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ಕಲಬುರಗಿ: ಚಾಕುವಿನಿಂದ ಇರಿದು ಆಟೋ ಚಾಲಕನ ಬರ್ಬರ ಹತ್ಯೆ ನಡೆಸಲಾಗಿದೆ. ಗೋಪಾಲ್ ಜಾಧವ್ (48) ಮೃತಪಟ್ಟವನು. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

Ad
300x250 2

ತಡರಾತ್ರಿ ತನ್ನ ಜಮೀನಿಗೆ ತೆರಳಿದ್ದ ಗೋಪಾಲ್‌ ಮೇಲೆ ಎರಗಿದ ದುಷ್ಕರ್ಮಿಗಳು ಏಕಾಏಕಿ ಚಾಕುವಿನಿಂದ ಇರಿದಿದ್ದಾರೆ.ಚಾಕುವಿನಿಂದ ಇರಿದು ಕೊಂದ ಬಳಿಕ ಜಮೀನಿನಲ್ಲಿರುವ ಮರಕ್ಕೆ ನೇಣು ಹಾಕಿ ಪರಾರಿ ಆಗಿದ್ದಾರೆ. ಈ ವೇಳೆ ಮರಕ್ಕೆ ಮೃತದೇಹವನ್ನು ಕಟ್ಟಿದ್ದ ಹಗ್ಗ ಕಟ್‌ ಆಗಿ ಬಿದ್ದಿದೆ.

ಜಮೀನಿನಲ್ಲಿ ಶವ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಂಚಾವರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ.

Ad
Ad
Nk Channel Final 21 09 2023
Ad