ಕಲಬುರಗಿ: ಯುವತಿಯರಿಗೆ ಕೆಲಸ, ನ್ಯಾಯ ಕೊಡಿಸುವುದಾಗಿ ಆತ್ಮೀಯತೆ ಬೆಳೆಸಿಕೊಂಡು ಅತ್ಯಾಚಾರ ಎಸಗುವುದರ ಜತೆಗೆ ಯುವತಿಯರನ್ನು ಇಟ್ಟುಕೊಂಡು ಶ್ರೀಮಂತರು ಹಾಗೂ ಅಧಿಕಾರಿಗಳ ಬಳಿ ಹೆಣ್ಣು ಮಕ್ಕಳನ್ನು ಬಳಸಿ ಹನಿಟ್ರ್ಯಾಪ್ ಬ್ಲಾಕ್ ಮೇಲ್ ದಂಧೆ ಪ್ರಕರಣವನ್ನು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
ಅನ್ಯಾಯ, ಶೋಷಣಗೆ ಒಳಗಾದ ಸಂತ್ರಸ್ತೆ ನೀಡಿದ ಹನಿಟ್ಯ್ರಾಪ್ ದಂಧೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶುಕ್ರವಾರ ದಲಿತ ಸೇನೆ ಮುಖಂಡ ರಾಜು ಲೇಂಗಟಿಯನ್ನು ಬಂಧಿಸಿರುವ ಪೊಲೀಸರು, ಶನಿವಾರ ತಡರಾತ್ರಿ ಪ್ರಭುಲಿಂಗ ಹಿರೇಮಠ ಎಂಬಾತನನ್ನು ಸಹ ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನ ಶೋಧನಾ ಕಾರ್ಯ ಮುಂದುವರೆದಿದೆ.
Ad