Ad

ತೀವ್ರ ಹೃದಯಾಘಾತ; 35 ವರ್ಷದ ವಿರಕ್ತ ಮಠದ ಸ್ವಾಮೀಜಿ ವಿಧಿವಶ

Virakta Math

ಕಲಬುರಗಿ: ತೀವ್ರ ಹೃದಯಾಘಾತದಿಂದ ಕಲಬುರಗಿಯ ಕಾಳಗಿ ತಾಲೂಕಿನ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ (35) ವಿಧಿವಶರಾಗಿದ್ದಾರೆ. ನಸುಕಿನ ಜಾವ ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

Ad
300x250 2

ಶ್ರೀ ಸಿದ್ದರಾಮ ಮಹಾಸ್ವಾಮಿ ಕಳೆದ ದಿನ ರಟಕಲ್ ಗ್ರಾಮದಲ್ಲಿ ವಚನ ಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಟಕಲ್ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ ಅದ್ಧೂರಿ ವಚನ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಶಾಸಕ ಬಿಆರ್ ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ.

 

Ad
Ad
Nk Channel Final 21 09 2023
Ad