Bengaluru 21°C
Ad

ತಲೆ ಮೇಲೆ ಶಾಲಾ ವಾಹನ ಹರಿದು 3 ವರ್ಷದ ಬಾಲಕಿ ದುರ್ಮರಣ

ತಲೆ ಮೇಲೆ ಶಾಲಾ ವಾಹನ \ಹರಿದ ಪರಿಣಾಮ 3 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ \ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ
ಕಲಬುರಗಿ: ತಲೆ ಮೇಲೆ ಶಾಲಾ ವಾಹನ \ಹರಿದ ಪರಿಣಾಮ 3 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ \ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.
ರಾಜಶೇಖರ್ ಎಂಬವರ ಪುತ್ರಿ ಖುಷಿ ಬನ್ನಟ್ಟಿ (3) ಮೃತ ಬಾಲಕಿ. ಶಾಲಾ ವಾಹನದಲ್ಲಿ ಅಣ್ಣ ಬಂದಿದ್ದ ವೇಳೆ ಆತನನ್ನು ಕರೆಯಲು ತಂದೆಯ ಹಿಂದೆ ಖುಷಿ ಹೋಗಿದ್ದಳು. ಆದರೆ ತಂದೆ ಈಕೆ ಬಂದಿರುವುದನ್ನು ಗಮನಿಸಿರಲಿಲ್ಲ. ಅಣ್ಣ ಬಸ್‌ನಿಂದ ಇಳಿದ ಬಳಿಕ ಶಾಲಾ ವಾಹನದ ಚಾಲಕ ಬಸ್ ಹಿಂದೆ ತಿರುಗಿಸಿದ್ದಾನೆ. ಈ ವೇಳೆ ಖುಷಿ ಬಸ್‌ನಡಿಗೆ ಸಿಲುಕಿದ್ದು, ಆಕೆಯ ತಲೆ ಮೇಲೆ ಶಾಲಾ ಬಸ್ ಹರಿದಿದೆ. ಘಟನೆಯ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
Ad
Ad
Nk Channel Final 21 09 2023