ಕಲಬುರಗಿ: ನಿದ್ರೆ ಮಾತ್ರೆ ಸೇವಿಸಿ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ನಡೆದಿದೆ.
ಕೃಷಿಸಚಿವ ಚೆಲುವರಾಯ ಸ್ವಾಮಿ ಹಾಗೂ ಕೃಷಿ ಇಲಾಖೆ ಹೆಸರಿನಲ್ಲಿ ಪತ್ರ ಬರೆದಿಟ್ಟು ಈ ಅಧಿಕಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವ್ಯಕ್ತಿ ಹೆಸರು ಧರ್ಮರಾಜ್ ಎಂದು ತಿಳಿದುಬಂದಿದ್ದು, ಜೇವರ್ಗಿ ತಾಲೂಕಿನಲ್ಲಿ ಕೃಷಿ ಅಧಿಕಾರಿಯಾಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ವ್ಯಕ್ತಿ ಡೆತ್ ನೋಟ್ ನಲ್ಲಿ, ತಮಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ ಎಂದು ಉಲ್ಲೇಖ ಮಾಡಿದ್ದಾರೆ. ಜೊತೆಗೆ ವರ್ಗಾವಣೆ ಹೆಸರಿನಲ್ಲಿ 2 ಲಕ್ಷದ 50 ಸಾವಿರ ವಸೂಲಿ ಮಾಡಿದ್ದಾರೆ ಎಂದು ಕೂಡ ಧರ್ಮರಾಜ್ ಆರೋಪ ಮಾಡಿದ್ದಾರೆ.
ತಮ್ಮನ್ನು ವಿಜಾಪುರ ಜಿಲ್ಲೆಗೆ ವರ್ಗಾವಣೆ ಮಾಡುವುದಾಗಿ ಬ್ಲ್ಯಾಕ್ಮೇಲ್ ಮಾಡಿ ತಮ್ಮಿಂದ ಎರಡು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಪತ್ರ ಅಧಿಕಾರಿ ಧರ್ಮರಾಜ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣದಿಂದ ಕಲಬುರಗಿಯಲ್ಲಿ ವರ್ಗಾವಣೆಯ ದಂಧೆ ಹೆಚ್ಚಾಗಿರುವ ಅನುಮಾನ ಮೂಡುವಂತೆ ಮಾಡಿದೆ.