ಕಲಬುರಗಿ: ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಬಾಲಕನೊಬ್ಬನಿಗೆ ಗಂಭೀರ ಗಾಯಗಳಾಗಿರುವ ಘಟನೆ ಔರಾದ್ ಗ್ರಾಮದ ಸಮೀಪ ನಡೆದಿದೆ.
Ad
ಅದೇ ಗ್ರಾಮದ ಅಸ್ಲಂ ಪಟೇಲ್ (40) ಮೃತ ವ್ಯಕ್ತಿ. ಮೃತ ಅಸ್ಲಾಂ ಪಟೇಲ್ ತಮ್ಮನ ಮಗ ರೇಹನ್ ಪಟೇಲ್(15) ಗಾಯಗೊಂಡಿದ್ದು, ಆತನಿಗೆ ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮೃತ ಅಸ್ಲಂ ಪಟೇಲ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಸಂಚಾರಿ 2 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ad
Ad