Bengaluru 21°C
Ad

ಬ್ಯಾಂಕ್ ಖಾತೆಗೆ ಆಧಾರ ಕಡ್ಡಾಯ ಇಲ್ಲದಿದ್ದರೆ ಬೆಳೆ ಪರಿಹಾರ ಕಟ್

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೆಳೆ ವಿಮೆ ಪರಿಹಾರ ಮಂಜೂರು ಮಾಡಲಾಗಿದೆ. ರೈತರು ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡದಿದ್ದರೆ ಖಾತೆಗೆ ಬೆಳೆ ವಿಮೆ ಪರಿಹಾರ ಹಣ ಜಮೆ ಆಗುವುದಿಲ್ಲ.

ಕಲಬುರಗಿ: 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೆಳೆ ವಿಮೆ ಪರಿಹಾರ ಮಂಜೂರು ಮಾಡಲಾಗಿದೆ. ರೈತರು ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡದಿದ್ದರೆ ಖಾತೆಗೆ ಬೆಳೆ ವಿಮೆ ಪರಿಹಾರ ಹಣ ಜಮೆ ಆಗುವುದಿಲ್ಲ.ಕಲಬುರಗಿ ಜಿಲ್ಲೆಯ 1,62,071 ರೈತರು, 1,86,850 ಹೆಕ್ಟರ್‌ ಪ್ರದೇಶದಲ್ಲಿ ಬೆಳೆ ವಿಮೆ ಯೋಜನೆಯಡಿ ನೊಂದಾಯಿಸಿಕೊಂಡಿದ್ದು, ಇದಕ್ಕಾಗಿ ರೂ.160.30 ಕೋಟಿಗಳಷ್ಟು ಬೆಳೆ ವಿಮಾಕಂತಿನ ರೂಪದಲ್ಲಿ ವಿಮಾ ಸಂಸ್ಥೆಗೆ ಸಂದಾಯವಾಗಿರುತ್ತದೆ.ಇದರಲ್ಲಿ ರೈತರ ವಂತಿಕೆ ರೂ. 18.47 ಕೋಟಿ, ರಾಜ್ಯ ಸರ್ಕಾರದ ವಂತಿಕೆ ರೂ. 70.92 ಕೋಟಿ ಹಾಗೂ ಕೇಂದ್ರ ಸರ್ಕಾರದ ವಂತಿಕೆ ರೂ. 70.92 ಕೋಟಿ ಸೇರಿದೆ.

ಬೆಳೆ ಕಟಾವು ಆಧಾರದ ಮೇಲೆ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಸೋಯಾಬೀನ್‌ ಹಾಗೂ ತೊಗರಿ ಬೆಳೆಗಳೆಗೆ ಜಿಲ್ಲೆಯ ಒಟ್ಟು 69,829 ರೈತರ ಬ್ಯಾಂಕ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ರೂ. 94.558 ಕೋಟಿ, ಸ್ಥಳೀಯ ಪ್ರಕೃತಿ ವಿಕೋಪದಡಿ 18,433 ರೈತರ ಬ್ಯಾಂಕ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ರೂ. 6.242 ಕೋಟಿ ವಿಮೆ ಮೊತ್ತ ಹಾಗೂ ಬೆಳೆ ರಾಶಿ ಸಂದರ್ಭದಲ್ಲಿ ಆಗುವ ಹಾನಿ (Post Harvest Losses) ಘಟಕದಡಿ 382 ರೈತರ ಬ್ಯಾಂಕ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ರೂ. 81.927 ಲಕ್ಷ ವಿಮೆ ಮೊತ್ತ ಪಾವತಿಸಲಾಗಿದೆ. ಹೀಗೆ ಒಟ್ಟು 88,644 ರೈತರ ಬ್ಯಾಂಕ ಖಾತೆಗೆ ಡಿ.ಬಿ.ಟಿ ಮೂಲಕ ರೂ. 101.619 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರು ಮಾಡಲಾಗಿದೆ. ಇದರಲ್ಲಿ 281 ರೈತರ ಬ್ಯಾಂಕ ಖಾತೆಗಳು ಆಧಾರ ಸಂಖ್ಯೆ ಜೋಡನೆಯಾಗದ ಕಾರಣ ರೂ. 35.95ಲಕ್ಷ ಪರಿಹಾರ ರೈತರ ಖಾತೆಗೆ ಜಮೆಯಾಗಿರುವುದಿಲ್ಲ. ರೈತರ ವಿವರವನ್ನು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದ್ದು ಸದರಿ ರೈತರು ತಮ್ಮ ಬ್ಯಾಂಕ ಖಾತೆಗೆ ಆಧಾರ ಜೋಡಣೆ ಮಾಡಿದಲ್ಲಿ ಅವರ ಬ್ಯಾಂಕ ಖಾತೆಗೆ ಬೆಳೆ ವಿಮೆ ಪರಿಹಾರ ಜಮೆಯಾಗಲಿದೆ.

ಈಗಾಗಲೇ ಡಿಸೆಂಬರ 2023 ಮಾಹೇಯಲ್ಲಿ ಜಿಲ್ಲೆಯಲ್ಲಿ ಮಳೆ ಆಶ್ರಿತ ತೊಗರಿ ಬೆಳೆ ವಿಮೆ ಮಾಡಿಸಿದ 1,20,724 ರೈತರ ಬ್ಯಾಂಕ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ರೂ. 83.63 ಕೋಟಿ ಮಧ್ಯಂತರ ಪರಿಹಾರ ಜಮೆ ಮಾಡಲಾಗಿರುತ್ತದೆ. ಒಟ್ಟಾರೆಯಾಗಿ ಕಲಬುರಗಿ ಜಿಲ್ಲೆಯಲ್ಲಿ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರ ಬ್ಯಾಂಕ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ರೂ. 185.249 ಕೋಟಿ ಬೆಳೆ ವಿಮೆ ಪರಿಹಾರ ಜಮೆ ಮಾಡಲಾಗಿದೆ.

Ad
Ad
Nk Channel Final 21 09 2023
Ad