Bengaluru 28°C
Ad

“ಅಂದು ನನ್ನ ರಾಜಿನಾಮೆಗೆ ಒತ್ತಾಯಿಸಿದರಿ ಇಂದು ನೀವೂ ರಾಜೀನಾಮೆ ನೀಡಿ”

Reddy

ಬೆಂಗಳೂರು: “ಇಷ್ಟೆಲ್ಲ ಆದರೂ ಇನ್ನೂ ಕುರ್ಚಿಗೆ, ಅಧಿಕಾರಕ್ಕೆ ಅಂಟಿಕೊಂಡಿರುವ ಸಿಎಂ ಸಿದ್ದರಾಮಯ್ಯನವರಿಗೆ ಏನು ಹೇಳಬೇಕು? ಅಂದು ಗಣಿ ಲೂಟಿ ಎಂದು ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದ್ರಿ. ಇಂದು ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ನಿಮ್ಮ ವಿರುದ್ಧ ಹೈಕೋರ್ಟ್ ತನಿಖೆಗೆ ಆದೇಶಿಸಿದೆ.

ಆದರೂ ರಾಜೀನಾಮೆ ನೀಡದೇ ಇರುವುದನ್ನು ನೋಡಿದರೆ ಯಾವ ಮಟ್ಟಕ್ಕೆ ತಲುಪಿದ್ದೀರಿ. ನಿಮಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯವೇ?  ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ರೆಡ್ಡಿ, ಅಂದು ಬಿಜೆಪಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಬಿಎಸ್ ವೈ ರಾಜೀನಾಮೆ ಕೇಳಿದ್ದು ಇದೇ ಸಿದ್ದರಾಮಯ್ಯ, ಗಣಿ ಲೂಟಿ ಎಂದು ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ, ನನ್ನ ರಾಜಿನಾಮೆಗೆ ಒತ್ತಾಯಿಸಿದರಿ. ಭ್ರಷ್ಟಾಚಾರ ಆರೋಪದಲ್ಲಿ ಇವರದೇ ಪಕ್ಷದ ಸಚಿವರೊಬ್ಬರು ರಾಜೀನಾಮೆ ಕೊಟ್ಟರು. ಇಷ್ಟೆಲ್ಲ ಆದರೂ ಇವರ ವಿರುದ್ಧ ಆರೋಪ ಬಂದಾಗ ಇವರಿಗೆ ಮಾತ್ರ ಇದೆಲ್ಲ ಅನ್ವಯ ಆಗುವುದಿಲ್ಲವೇ? ಮೊದಲು ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

Ad
Ad
Nk Channel Final 21 09 2023