ನಮ್ಮ ಕರ್ನಾಟಕ ಸಂಪದ್ಭರಿತ ರಾಜ್ಯ. ಇತಿಹಾಸದುದ್ದಗಲಕ್ಕೂ ಯುದ್ಧಕ್ಕಿಂತ ಹೆಚ್ಚಾಗಿ, ಜನ ಕಲ್ಯಾಣ ಮತ್ತು ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ನಮ್ಮ ರಾಜ ಮಹರಾಜರುಗಳು, ಮಂತ್ರಿವರ್ಯರು ಹಾಗೂ ಹಲವಾರು ಸಾಧಕರು. ಆದರೂ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದ ನಂತರವೂ, ʼಉಚಿತʼ ಘೋಷಣೆಗಳ ಮೇಲೆಯೇ ಚುನಾವಣೆಗಳು ನಡೆಯುತ್ತಿವೆ ಮತ್ತು ಸರ್ಕಾರಗಳು ರಚನೆಯಾಗುತ್ತಿವೆ.
ಆದರೆ ಆರ್ಥಿಕವಾಗಿ ಮುಂದುವರೆಯುತ್ತಿದ್ದೇವೆಯೇ? ಎಂದರೆ ಬಹುಶ: ʼಇಲ್ಲʼ ಎನ್ನುವ ಉತ್ತರ ಬಹುತೇಕರದ್ದಾಗಿರಲಿದೆ. ಇದೇ ಮುಂದುವರೆದರೆ, ಆರ್ಥಿಕವಾಗಿ ದಿವಾಳಿಯಾಗುವ ಕಾಲ ದೂರದಲ್ಲಿಲ್ಲ. ಆದರೆ ವಿಷಯ ಇರುವುದು, ʼಉಚಿತʼಗಳನ್ನು ನೀಡುವ ಮೂಲಕ ದಿವಾಳಿಯೆಡೆಗೆ ಸಾಗುವ ಬದಲು, ದೂರದೃಷ್ಟಿಯ, ಜನಪರ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ, ಕರ್ನಾಟಕವನ್ನು ಸೂಪರ್ ಪವರ್ ರಾಜ್ಯವಾಗಿಸುವ ಅವಕಾಶ ಇರುವಾಗ ಉಚಿತಗಳ ಅಗತ್ಯವೇನು ಎನ್ನುದರ ಮೇಲೆ.
ಭಾರತ ಸೂಪರ್ ಪವರ್ ದೇಶವಾಗಬೇಕು ಎನ್ನುವುದು ಪ್ರತಿಯೊಬ್ಬ ಭಾರತೀಯರ ಕನಸು, ಅದೇ ಸಮಯದಲ್ಲಿ ಕರ್ನಾಟಕವೂ ಸೂಪರ್ ಪವರ್ ರಾಜ್ಯವಾಗಬೇಕು. ಸೂಪರ್ ಪವರ್ ಎಂದರೆ, ಮಿಲಿಟರಿ ಶಕ್ತಿ ಮತ್ತು ಕಾರ್ಪೋರೇಟ್ ಜಗತ್ತಿನ ಮೇಲುಗೈ ಮಾತ್ರವಲ್ಲ, ಕೃಷಿಯಿಂದ ವೈಮಾನಿಕ ಕ್ಷೇತ್ರದವರೆಗೆ ಪ್ರತಿಯೊಂದರಲ್ಲಿಯೂ ಪ್ರಾಬಲ್ಯರಾಗುವುದು.
ಈ ನಿಟ್ಟಿನಲ್ಲಿ ಹೊಸದೊಂದು ರಾಜಕೀಯ ಪಕ್ಷ, ಕಾರ್ಯಸಾಧ್ಯವಾಗುವಂತಹ ಹೊಸ ಹೊಸ ಯೋಜನೆಗಳೊಂದಿಗೆ ಆರಂಭವಾಗುತ್ತಿದೆ. ʼಜನರಿಂದ ಜನರಿಗಾಗಿ, ಜನ ಸಾಮಾನ್ಯರ ಗರ್ವʼ ಎಂಬ ಘೋಷವಾಕ್ಯದೊಂದಿಗೆ, 2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದೆ ʼಜನಪರ್ವʼ ಪಕ್ಷ.
ಹಾಗೂ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಬಿಬಿಎಂಪಿ ಚುನಾವಣೆಗಳಿಗೂ ಹಂತ ಹಂತವಾಗಿ ಸಿದ್ಧತೆ ಆರಂಭಿಸಿದೆ. ಸಮಗ್ರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಪ್ರಸ್ತುತಪಡಿಸುತ್ತಾ, ʼಉಚಿತʼಗಳ ಬದಲಿಗೆ ಖಚಿತವಾಗಿ ಕರ್ನಾಟಕವನ್ನು ದೇಶದಲ್ಲಿಯೇ ನಂ.1 ರಾಜ್ಯ ಮಾಡುವ ಸಂಕಲ್ಪ ಹೊಂದಿದೆ.
ಮೊದಲನೆಯ ಪ್ರಾಶಸ್ತ್ಯವಾಗಿ ʼಸಪ್ತ ಸಂಕಲ್ಪʼ ಯೋಜನೆಗಳು ಹಾಗೂ ʼಪ್ರತಿ ಯೋಜನೆ ಪ್ರಗತಿಯೆಡೆಗೆʼ ಆಶಯದಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಯೋಜನೆಗಳನ್ನು ಒಳಗೊಂಡು, ಸಮರ್ಥ ಸಂಘಟನೆ ಹಾಗೂ ತನ್ನ ಕಾರ್ಯಕರ್ತರಿಗಾಗಿ ವಿಶೇಷ ಚಟುವಟಿಕೆಗಳೊಂದಿಗೆ ಭರವಸೆಯ ಪಕ್ಷವಾಗಿ ಆರಂಭವಾಗುತ್ತಿದೆ.
ಕೃಷಿ ಕರ್ನಾಟಕ, ಉದ್ಯೋಗ ಪರ್ವ, ಪೊಲೀಸ್ ಜನ ಸುರಕ್ಷಾ ಯೋಜನೆ, ಜನ ಪಂಚಾಯತ್, ಭಾರತ್ ಕಲ್ಯಾಣ್, ಸುಗಮ ಯೋಜನೆ, ಕಲ್ಯಾಣ್ ಬ್ಯಾಂಕ್ ಇವು ʼಸಪ್ತ ಸಂಕಲ್ಪʼ ಯೋಜನೆಗಳಾಗಿದ್ದು, ವಿದ್ಯೆ, ಉದ್ಯೊಗ, ಉದ್ಯಮ (Education, Employment, Entrepreneurship) ಇವುಗಳ ಸಂಯೋಗದ ಮೂಲಕ, ಪ್ರತಿಯೊಂದು ಕುಟುಂಬಕ್ಕೆ, ಕನಿಷ್ಠ 2 ಉದ್ಯೋಗ ಸೃಷ್ಠಿಸುವ ಭರವಸೆ.
ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆ, ಹವಾಲಾ, ಆರ್ಥಿಕ ಅಪರಾಧ ಚಟುವಟಿಕೆ, ಭಯೋತ್ಪಾದನೆಯ ಜೊತೆಗೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ತಡೆಯಲು, 500 ಮತ್ತು 2000 ರೂಪಾಯಿ ನೋಟುಗಳ ಮೇಲಿನ ನಂಬರ್ಗಳ ʼಟ್ರೇಸಿಂಗ್ ಸಿಸ್ಟಮ್ʼ ತರುವ ಮೂಲಕ ಸಮಸ್ತ ಕರ್ನಾಟಕಕ್ಕೇ ಕಾಯಕಲ್ಪ ನೀಡಲಿದೆ ಜನಪರ್ವ.
ಭಾರತ್ ಕಲ್ಯಾಣ್ ಯೋಜನೆಯ ಮೂಲಕ, ನೋಟುಗಳ ಟ್ರೇಸಿಂಗ್ ಸಿಸ್ಟಮ್ ತಂದು, ತೆರಿಗೆಯ ಪ್ರತಿ ರೂಪಾಯಿಯನ್ನು ಪ್ರಗತಿಯೆಡೆಗೆ ಬಳಸಿ, ಅಕ್ರಮ ತಡೆಗಟ್ಟಿ 2035ರ ವೇಳೆಗೆ 15 ಲಕ್ಷ ಕೋಟಿ ರೂಪಾಯಿಯ ಐತಿಹಾಸಿಕ ಕರ್ನಾಟಕ ಬಜೆಟ್ ಮಂಡಿಸುವ ಸಾಧ್ಯತೆಯನ್ನು ಜನರ ಮುಂದಿಡುತ್ತಿದೆ ಜನಪರ್ವ.
ರೈತ ಕುಟುಂಬಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರದ ಕ್ಷಿಪ್ರ ಬೆಳವಣಿಗೆಯ ಮೂಲಕ, ಇಡೀ ದೇಶದಲ್ಲಿ ಕರ್ನಾಟಕವನ್ನು ಪ್ರಮುಖ ಕೃಷಿ ಸ್ವಾವಲಂಬಿ ಮತ್ತು ಕೃಷಿ ರಫ್ತುದಾರ ರಾಜ್ಯವಾಗಿಸಿ, ಜಗತ್ತಿನ ನೂರಾರು ದೇಶಗಳಿಗೆ ಅನ್ನ ನೀಡುವ ರಾಜ್ಯವಾಗಿಸುವ ಕಾರ್ಯಕ್ರಮ ತರಲಿದೆ ಜನಪರ್ವ. ಇದಕ್ಕಾಗಿ ಅನ್ನದಾತ ಗುರುತಿನ ಪತ್ರ, Smart Krishi Townships, Agricultural Corridors, Krishi startups, Agricultural security Force, Smart Krishi universities, Flood and Drought management ವಿಶೇಷ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದೆ.
ಕರ್ನಾಟಕದ ಪೊಲೀಸ್ ಕಾನ್ಸ್ಟೇಬಲ್ ಗಳ ಅಳೆತೆಗೋಲಿಲ್ಲದ ದುಡಿಮೆಯ ಅವಧಿಯನ್ನು, ಜನಪರ್ವ ಹೊಸ ರೀತಿಯಲ್ಲಿ ನಿಗದಿ ಪಡಿಸಲಿದೆ. ಅದಕ್ಕಾಗಿಯೇ ತಿಂಗಳಿಗೆ 250 ಘಂಟೆಗಳ ಕೆಲಸದ ಸಮಯ ನಿಗದಿ ಪಡಿಸಿ, ಪೋಲಿಸ್ ಕಾನ್ಸ್ಟೇಬಲ್ಗಳ ಒತ್ತಡವನ್ನು ಕಡಿಮೆ ಮಾಡಿ, ವೇತನ ಹೆಚ್ಚಿಸಿ, Feed Back System ಮೂಲಕ ಪ್ರತಿ ವರ್ಷ Rewards ನೀಡುವ ವ್ಯವಸ್ಥೆ ತಂದು, ಕಾನೂನು ಸುವ್ಯವಸ್ಥೆ ಕಾಪಾಡುವವರ ಹಿತ ಕಾಯಲು ಸಿದ್ಧವಾಗಿದೆ ಜನಪರ್ವ. ʼಜನತಾ ಠಾಣೆʼ ಸೇರಿದಂತೆ ವಿಶೇಷ ಕಾರ್ಯಕ್ರಮಗಳ ಮೂಲಕ, ಅಪರಾಧಗಳಿಗೆ ಕಡಿವಾಣ ಹಾಕುವ ಸದಾಶಯ ಹೊಂದಿದೆ ಜನಪರ್ವ.
ಪ್ರತಿಯೊಂದು ಜಿಲ್ಲಾ ಪಂಚಾಯತ್ಕ್ಷೇತ್ರದಲ್ಲಿರುವ, ಪ್ರತಿಯೊಂದು ಕುಟುಂಬದಿಂದ ಕನಿಷ್ಠ ಒಬ್ಬರಾದರೂ, ಗ್ರಾಮ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತಹ ಅವಕಾಶ ನೀಡಲು, ʼಜನ ಪಂಚಾಯತ್ʼ ಹೆಸರಿನ ಹೊಸ ಕಾರ್ಯಕ್ರಮ ತರಲಿದೆ ಜನಪರ್ವ. ಈ ಮೂಲಕ ಮತ್ತಷ್ಟು ಅಧಿಕಾರ ವಿಕೇಂದ್ರಿಕರಣ ಮಾಡಿ, ಮನೆಮನೆಯಿಂದಲೂ, ಗ್ರಾಮದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲಿದೆ.
ವಾಹನ ನಮ್ಮೆಲ್ಲರ ಆಸ್ತಿ. ನಮ್ಮಲ್ಲಿ ಎಷ್ಟು ಜನ ನಮ್ಮ ವಾಹನಗಳಿಗಾಗಿ ಪ್ರತಿ ತಿಂಗಳು ಸಾಲ ಕಟ್ಟುತ್ತಿಲ್ಲ ಹೇಳಿ? ಅಂತಹ ನಮ್ಮ ವಾಹನಗಳನ್ನು ಸುರಕ್ಷಿವಾಗಿಡಲು ಮತ್ತು ಅಪಘಾತಗಳನ್ನು ತಪ್ಪಿಸಲು, ಅಕ್ರಮ ಚಟುವಟಿಕೆಗಳನ್ನು ತಪ್ಪಿಸಲು ಜನಪರ್ವ ತರುತ್ತಿದೆ ಸುಗಮ ಯೋಜನೆ. ವಾಹನದ ನಂಬರ್, ಚಾಲನಾ ಪರವಾನಗಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ, ಕರ್ನಾಟಕದಲ್ಲಿರುವ 3 ಕೋಟಿಗೂ ಅಧಿಕ ವಾಹನಗಳ ನಿರ್ವಹಣೆಯನ್ನು ಒಂದೇ ವೇದಿಕೆ ತಂದು, ʼಸಮಗ್ರ ವಾಹನ ನಿರ್ವಹಣಾ ವ್ಯವಸ್ಥೆʼ ತರಲಿದೆ ಜನಪರ್ವ. ಹಾಗೂ ಬೆಂಗಳೂರಿನ ಪ್ರತಿಯೊಬ್ಬರ ಕನಸಾಗಿರುವ ʼಸಿಗ್ನಲ್ ಫ್ರೀ ಬೆಂಗಳೂರುʼ ಸಾಧ್ಯವಾಗಿಸುವ ಸುಲಭ ಯೋಜನೆ ಹೊಂದಿದೆ.
ಸರ್ಕಾರದ ಒಡೆತನದಲ್ಲಿ, ಹೊಸದಾದ ʼಕಲ್ಯಾಣ್ ಬ್ಯಾಂಕ್ʼ ಹೆಸರಿನ ಬ್ಯಾಂಕ್ ಸ್ಥಾಪಿಸಿ, ಪ್ರತಿಯೊಬ್ಬರ ತೆರಿಗೆಯ ಪ್ರತಿಯೊಂದು ರೂಪಾಯಿಯನ್ನು ಒಂದೇ ಬ್ಯಾಂಕ್ನಲ್ಲಿ ನಿರ್ವಹಣೆ ಮಾಡಲಿದೆ. ತೆರಿಗೆ ಸಂಗ್ರಹ ಮತ್ತು ಯೋಜನೆಗಳಿಗೆ ಹಣ ಬಿಡುಗಡೆ ಮಾಡುವುದೂ ಸೇರಿದಂತೆ, ಬಜೆಟ್ ಮಂಡನೆಯ ಪ್ರತಿಯೊಂದು ರೂಪಾಯಿಯ ಆಯ-ವ್ಯಯ ಹೊಸ ಬ್ಯಾಂಕ್ನ ಮೂಲಕವೇ ನಡೆಯಲಿದೆ. ಪಾರದರ್ಶಕ ಆಡಳಿತವೇ ಜನಪರ್ವದ ಮೂಲ ಉದ್ದೇಶವಾಗಿರಲಿದೆ.
ಇವುಗಳ ಜೊತೆಗೆ ʼಪ್ರತಿ ಯೋಜನೆ ಪ್ರಗತಿಯೆಡೆಗೆʼ ಆಶಯದಡಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕಾಗಿ ʼಅತಿಥಿʼ ಯೋಜನೆ, ಪ್ರತಿ ಗ್ರಾಮ, ಪ್ರತಿ ಏರಿಯಾದಲ್ಲೊಂದು ಕೆರೆ ಶಾಶ್ವತಗೊಳಿಸಲು ʼಜಲ ಸಂಪರ್ಕʼ ಯೋಜನೆ, ಶಿಕ್ಷಣ ಕ್ಷೇತ್ರಕ್ಕಾಗಿ ʼಉನ್ನತಿʼ ಯೋಜನೆ, ಪ್ರಾಣಿ ಪಕ್ಷಿಗಳ ಪಾಲನೆ ಮತ್ತು ಪಶು ಉದ್ಯಮ ಉತ್ತೇಜಿಸಲು ʼಪುಣ್ಯ ಪಶುʼ ಯೋಜನೆ, ಆರೋಗ್ಯ ಕ್ಷೇತ್ರಕ್ಕಾಗಿ ʼಜೀವನಾಡಿʼ ಯೋಜನೆ, ಪ್ರತಿಯೊಬ್ಬ ಕಾರ್ಮಿಕರ ಹಿತ ಕಾಯಲು ʼಕಾಯಕ ಶಕ್ತಿʼ ಯೋಜನೆ ಸೇರಿದಂತೆ ಕೈಗಾರಿಕೆಗಳು, ಐಟಿ-ಬಿಟಿ, ಕ್ಷೀಡೆ, ಮನರಂಜನಾ ಕ್ಷೇತ್ರ, ಆಹಾರ ಮತ್ತು ನಾಗರೀಕ ಸರಬರಾಜು, ವಸತಿ, ಅರಣ್ಯ, ಗಣಿ, ವೈದ್ಯಕೀಯ, ಸಹಕಾರ ಸೇರಿದಂತೆ ಗೃಹ ಇಲಾಖೆ, ಹಣಕಾಸು ನಿರ್ವಹಣೆ ಮತ್ತು ಆಡಳಿತ ಸುಧಾರಣೆಯನ್ನು ಒಳಗೊಂಡು, ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ʼಜನಪರ್ವʼ ಪಕ್ಷ ತನ್ನದೇ ಆದ ಯೋಜನೆಗಳೊಂದಿಗೆ ಬರುತ್ತಿದೆ.
ಬೂತ್ ಮಟ್ಟದಿಂದ ಪ್ರತಿ ತಾಲೂಕು, ಪ್ರತಿ ಜಿಲ್ಲೆಯಲ್ಲೂ ಸಮರ್ಥ ಸಂಘಟನೆಯನ್ನು ಸಂಘಟಿಸಿ, ರಾಜ್ಯ ಮಟ್ಟದಲ್ಲಿ ಮತ್ತು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲು, ʼಜನಪರ್ವ ರಾಷ್ಟ್ರೀಯ ರಾಜಕೀಯ ವ್ಯವಹಾರಗಳ ಸಮಿತಿʼ ಯನ್ನು ಒಳಗೊಂಡ ಸಮರ್ಥ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ ಜನಪರ್ವ. ಯುವಜನಪರ್ವ, ಮಹಿಳಾ ಪರ್ವ, ವಿದ್ಯಾರ್ಥಿ ಪರ್ವ, ಕಾನೂನು ಪರ್ವ, ಕಾರ್ಮಿಕ ಪರ್ವ, ಐಟಿ ಪರ್ವ, ರೈತ ಪರ್ವ, ವೈದ್ಯ ಪರ್ವ ಸೇರಿದಂತೆ ಹಲವಾರು ಘಟಕಗಳು ಬೂತ್ ಮಟ್ಟದಿಂದ ರಾಜ್ಯ ಘಟಕದವರೆಗೆ, ಜನಪರ್ವ ಸಂಘಟನೆಗಾಗಿ ಕಾರ್ಯನಿರ್ವಹಿಸಲಿವೆ. ಪ್ರತಿ ಘಟಕದಲ್ಲೂ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಕಾರ್ಯದರ್ಶಿ, ವಕ್ತಾರರು ಸೇರಿದಂತೆ ವಿವಿಧ ಸಮಿತಿಗಳು ಇರಲಿವೆ.
ಮುಂಬರುವ ಚುನಾವಣೆಗಳಿಗಾಗಿ 2025ರಲ್ಲಿ ಮೂರು ವಿವಿಧ ರೀತಿಯ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಾಗಿ ʼಗ್ರಾಮಪರ್ವʼ ಹೆಸರಿನಲ್ಲಿ ತರಬೇತಿ ಕಾರ್ಯಾಗಾರ ನಡೆಯಲಿದೆ. ಬಿಬಿಎಂಪಿ ಚುನಾವಣೆಗಾಗಿ ʼಬೆಂಗಳೂರು ಪರ್ವʼ ತರಬೇತಿ ಕಾರ್ಯಗಾರ ನಡೆಯಲಿದೆ. ಹಾಗೂ 2028ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಲು, ʼಶಾಸಕ ಪರ್ವʼ ಹೆಸರಿನ ತರಬೇತಿ ಕಾರ್ಯಗಾರವನ್ನು ಆಯೋಜಿಸುತ್ತಿದೆ ಜನಪರ್ವ ಪಕ್ಷ.
ಈ ತರಬೇತಿ ಕಾರ್ಯಗಾರಗಳಲ್ಲಿ ಮತದಾರರೊಂದಿಗೆ ಅತ್ಯುತ್ತಮ ಸಂಪರ್ಕ ಹೊಂದಿರುವುದು, ರಾಜಕೀಯ ಭಾಷಣ, ಪ್ರಣಾಳಿಕೆ ರಚನೆ, ಡಿಜಿಟಲ್ ಪ್ರಚಾರ, ಚುನಾವಣಾ ತಂತ್ರಗಾರಕೆ ನಿರ್ವಹಣೆ, ಮಾಧ್ಯಮ ನಿರ್ವಹಣೆ, ಕಾರ್ಯಕರ್ತರ ತಂಡ ರಚನೆ ಸೇರಿದಂತೆ, ಒಬ್ಬ ಜನಪ್ರತಿನಿಧಿಯಾಗಲು ಮತ್ತು ಚುನಾವಣೆ ಗೆಲ್ಲಲು ಅಗತ್ಯವಿರುವ ಎಲ್ಲಾ ಕೌಶಲ್ಯಗಳ ತರಬೇತಿ ನೀಡಲಿದೆ ಜನಪರ್ವ.
ʼಸೂಪರ್ ಪವರ್ ಕರ್ನಾಟಕʼ ಇದು ಕನಸು ಮಾತ್ರವಲ್ಲ, ಅಕ್ಷರಶ: ಸಾಧ್ಯ. ಈ ಎಲ್ಲಾ ಯೋಜನೆಗಳು ಮತ್ತು ಕಾರ್ಯಚಟುವಟಿಕೆಗಳ ಮೂಲಕ, 2035ರ ವೇಳೆಗೆ 15 ಲಕ್ಷ ಕೋಟಿ ರೂಪಾಯಿ ಐತಿಹಾಸಿಕ ಬಜೆಟ್ ಮಂಡಿಸಿ, ಭಾರತೀಯತೆಯ ಅಸ್ಮಿತೆಯಲ್ಲಿ, ಕರ್ನಾಟಕವೇ ಪ್ರಥಮ ಎಂಬ ಧ್ಯೇಯದೊಂದಿಗೆ ಆರಂಭವಾಗುತ್ತಿದೆ ಜನಪರ್ವ.