Ad

ನಾಗರ ಪಂಚಾಮಿಗೆ ಪಶುವೈದ್ಯನ ಕೊಡುಗೆ : ನಾಗರಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ನಗರದ ಹಳೆಯ ಕಟ್ಟಡ‌ ತೆರವು ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ ನಾಗರಹಾವಿಗೆ ಇಲ್ಲಿನ ಪಾಲಿಕ್ಲಿನಿಕ್​​ನ ಪಶುವೈದ್ಯ ಡಾ.ಸಣ್ಣಭೀರಪ್ಪ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಹಾವೇರಿ ನಗರದ ಕನಕಾಪುರ ರಸ್ತೆಯ ರಾಜಸ್ಥಾನ ಡಾಬಾ ಹಳೆಯ ಕಟ್ಟಡವನ್ನು ತೆರವುಗೊಳಿಸುತ್ತದ್ದ ವೇಳೆ ಅವೇಶಷಗಳಡಿಯಲ್ಲಿ ಸಿಲುಕಿ ನಾಗರಹಾವು ಗಾಯಗೊಂಡು ಒದ್ದಾಡುತ್ತಿತ್ತು. ಕೂಡಲೆ ಡಾಬಾದವರು ಉರಗ ರಕ್ಷಕ ನಾಗರಾಜ ಭೈರಣ್ಣನವರಿಗೆ ವಿಷಯ ತಿಳಿಸಿದ್ದಾರೆ.

ಹಾವೇರಿ: ನಗರದ ಹಳೆಯ ಕಟ್ಟಡ‌ ತೆರವು ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ ನಾಗರಹಾವಿಗೆ ಇಲ್ಲಿನ ಪಾಲಿಕ್ಲಿನಿಕ್​​ನ ಪಶುವೈದ್ಯ ಡಾ.ಸಣ್ಣಭೀರಪ್ಪ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಹಾವೇರಿ ನಗರದ ಕನಕಾಪುರ ರಸ್ತೆಯ ರಾಜಸ್ಥಾನ ಡಾಬಾ ಹಳೆಯ ಕಟ್ಟಡವನ್ನು ತೆರವುಗೊಳಿಸುತ್ತದ್ದ ವೇಳೆ ಅವೇಶಷಗಳಡಿಯಲ್ಲಿ ಸಿಲುಕಿ ನಾಗರಹಾವು ಗಾಯಗೊಂಡು ಒದ್ದಾಡುತ್ತಿತ್ತು. ಕೂಡಲೆ ಡಾಬಾದವರು ಉರಗ ರಕ್ಷಕ ನಾಗರಾಜ ಭೈರಣ್ಣನವರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಉರಗ ರಕ್ಷಕ ಭೈರಣ್ಣ ಹಾವನ್ನು ರಕ್ಷಿಸಿ, ಚೀಲದೊಳಗೆ ಹಾಕಿಕೊಂಡು ಪಾಲಿಕ್ಲಿಕ್​ಗೆ ತೆಗೆದಯಕೊಂಡು ಹೋಗಿದ್ದಾರೆ. ಅಲ್ಲಿ ಪಶುವೈದ್ಯಾಧಿಕಾರಿ ಡಾ.ಸಣ್ಣಭೀರಪ್ಪ ಹಾವನ್ನು ತಪಾಸಣೆ ಮಾಡಿ ಶಸ್ತ್ರಚಿಕಿತ್ಸೆಗೆ ಸಿದ್ದತೆ ಮಾಡಿದ್ದಾರೆ. ಬಳಿಕ, ಹಾವಿಗೆ ಅನಸ್ತೇಶಿಯಾ ನೀಡಿ ಪ್ರಜ್ಞೆ ತಪ್ಪಿಸಿ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೀಡಿದ್ದಾರೆ.

Ad
Ad
Nk Channel Final 21 09 2023