ಹಾವೇರಿ: ಬೇರೆ ಧರ್ಮಗಳು ಉತ್ಪತ್ತಿ ಆಗುವ ಮುನ್ನ ಇದ್ದದ್ದೇ ಹಿಂದೂ ಧರ್ಮ. ಈ ದೇಶದಲ್ಲಿ ಇರುವ ಮುಸ್ಲಿಮರೂ ಹಿಂದೂಗಳೇ. ಅಖಂಡ ಭಾರತ ಇದು ಎಂದು ಹರಿಹರಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಹಾವೇರಿಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮ ಹಿಂದೂವಿನ ಭಾಗವಾಗಿದೆ. ಆರ್ಯರು ಹಿಂದೂ ಭಾಗವಾಗಿದ್ದು, ಹಿಂದೂಗಳಿಗೆ ಯಾವುದೇ ಬಾರ್ಡರ್ ಇಲ್ಲ. ಜಗತ್ತಿನ ಸಿದ್ಧಾಂತ ತತ್ವಗಳಿಗೆ ಮೂಲ ಹಿಂದೂ ಧರ್ಮವಾಗಿದೆ. ಶ್ರೀಲಂಕಾ ಅಫ್ಘಾನಿಸ್ತಾನದಲ್ಲಿ ಇರುವವರೆಲ್ಲ ಹಿಂದೂಗಳೇ. ಇನ್ನು ಧರ್ಮ ಆಚರಣೆ ಮನೇಲಿ ಇರಬೇಕು.
ದೇಶ ಸಮುದಾಯ ಅಂತಾ ಬಂದಾಗ ನಾವೆಲ್ಲಾ ಹಿಂದೂಗಳಾಗಿದ್ದೇವೆ. ಬೇರೆ ಸ್ವಾಮೀಜಿಗಳ ಹೇಳಿಕೆ ಬಗ್ಗೆ ಪ್ರಸ್ತಾವನೆ ಮಾಡಲ್ಲ ಎಂದು ಕೆಲ ಸ್ವಾಮೀಜಿಗಳಿಗೆ ವಚನಾನಂದ ಸ್ವಾಮೀಜಿ ತಿರುಗೇಟು ನೀಡಿದರು.
ಹಿಂದೂ ಅಂದ್ರೆ ಶುದ್ದವಾದ ಜೀವನ ಪದ್ದತಿ ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ಕೆಲವರು ಕಲ್ಲು ನಾಗರಕ್ಕೆ ಹಾಲೆರೆಯಬೇಡಿ, ಅನಾಥ ಮಕ್ಕಳಿಗೆ ಹಾಲು ಕೊಡಿ ಅಂತಾರೆ. ಹಾಲು ಕೊಡೋ ತಾಯಿ ಹತ್ಯೆ ಮಾಡ್ತಾ ಇದಾರೆ. ಎಷ್ಟು ಜನ ಸ್ವಾಮಿಗಳು ಗೋಹತ್ಯೆ ವಿರೋಧಿಸಿದಿರಿ? ಅನಾಥ ಮಕ್ಕಳ ಮೇಲೆ ಕರುಣೆ ಇದ್ದರೆ ಹಾಲು ಕೊಡಿ ಎಂಬ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ವಚನಾನಂದ ಸ್ವಾಮೀಜಿ ಕಿಡಿಕಾರಿದರು.