Bengaluru 20°C
Ad

ಪ್ರತಿಮಾ ಹಾಸನ್ ಗೆ ರಾಜ್ಯಮಟ್ಟದ ‘ಗಡಿನಾಡ ಕನ್ನಡತಿ’ ಪ್ರಶಸ್ತಿ

ಚೈತನ್ಯ ಭಾರತಿ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಕೊಡ ಮಾಡುವ ರಾಜ್ಯಮಟ್ಟದ 'ಗಡಿನಾಡ ಕನ್ನಡತಿ' ಪ್ರಶಸ್ತಿಯನ್ನು ಪ್ರತಿಮಾ ಹಾಸನ್ ಪಡೆದುಕೊಂಡಿದ್ದಾರೆ.

ಹಾಸನ: ಚೈತನ್ಯ ಭಾರತಿ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಕೊಡ ಮಾಡುವ ರಾಜ್ಯಮಟ್ಟದ ‘ಗಡಿನಾಡ ಕನ್ನಡತಿ’ ಪ್ರಶಸ್ತಿಯನ್ನು ಪ್ರತಿಮಾ ಹಾಸನ್ ಪಡೆದುಕೊಂಡಿದ್ದಾರೆ.

Ad

ಕಾರ್ಯಕ್ರಮವು ಮೈಸೂರು ಜಿಲ್ಲೆ ಯಲ್ಲಿ ಕೇರಳ ಕರ್ನಾಟಕ ಗಡಿ ಭಾಗದ ಹೆಚ್.ಡಿ.ಕೋಟೆಯ ದೊಡ್ಡ ಬ್ಯಾರೆನ ಕಪ್ಪೆ ಗ್ರಾಮದಲ್ಲಿ ನ.30ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಾಸನ ನಗರದ ‘ಸಾಹಿತ್ಯದ ನವಿಲು’ ‘ಮಹಿಳಾ ಸಾಧಕಿ’,’ಬಹುಮುಖ ಪ್ರತಿಭೆ’ಎಂದು ಬಿರುದು ಪಡೆದಿರುವ ‘ ‘ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ’ದ ಸಂಸ್ಥಾಪಕಿ ಶ್ರೀಮತಿ ಹೆಚ್.ಎಸ್ ಪ್ರತಿಮಾ ಹಾಸನ್ ಅವರು ಸ್ವೀಕರಿಸಲಿದ್ದಾರೆ.

Ad

ಹೆಚ್. ಎಸ್. ಪ್ರತಿಮಾ ಹಾಸನ್ ರವರು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದಂತಹ ಹಲವಾರು ಪ್ರಕಾರಗಳನ್ನು ಸಿದ್ದಿಸಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ವಿವಿಧ ಪ್ರಕಾರದ ಕೃತಿಗಳನ್ನು ಕೊಡುಗೆಯಾಗಿ ನೀಡಿರುವುದು. ದಿನನಿತ್ಯ ಅಂಕಣಗಾರ್ತಿಯಾಗಿ ತನ್ನದೇ ಆದಂತಹ ವಿಭಿನ್ನ ರೀತಿಯ ಶೈಲಿಯಲ್ಲಿ ಲೇಖನಗಳನ್ನು ಬರೆದು ನಿರ್ಭಿಡತೆಯಿಂದ ಬರಹದ ಮುಖಾಂತರ ಸಮಾಜದ ಓರೆ ಕೋರೆಗಳನ್ನು ತಿದ್ದಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯವಾಗಿದ್ದು. ಅಂತರಾಷ್ಟ್ರದ ಮಟ್ಟದವರೆಗೂ ಸಾಮಾಜಿಕ ಕಾರ್ಯಗಳಿಂದ ತನ್ನ ಚಾಪನ ಮೂಡಿಸಿದ್ದಾರೆ.

Ad

ಈಗಾಗಲೇ ಹಲವಾರು ಸಂಘ-ಸಂಸ್ಥೆಯವರು ಗುರುತಿಸಿ ಇವರಿಗೆ ಅಂತರಾಷ್ಟ್ರೀಯ ಮಟ್ಟದವರೆಗೂ ಸನ್ಮಾನಗಳು ಸಿಕ್ಕಿವೆ. ಹೀಗೆ ಇವರ ಸೇವೆಯು ಸಮಾಜಕ್ಕೆ ಸಲ್ಲಬೇಕೆಂದು ಈ ಪ್ರಶಸ್ತಿಯನ್ನು ನೀಡಿ ಗೌರವ ಸನ್ಮಾನಗಳನ್ನು ಮಾಡಲಾಗುತ್ತಿದೆ ಎಂದು ಸಿಬೆಕ್ ಟ್ರಸ್ಟ್ ನ ಸಂಯೋಜಕಿ ನಂದಿನಿ ತಿಳಿಸಿದ್ದಾರೆ.

Ad

ಪ್ರಶಸ್ತಿಯನ್ನು ಪಡೆಯುತ್ತಿರುವ ಹೆಚ್ ಎಸ್ ಪ್ರತಿಮಾ ಹಾಸನ್ ರವರಿಗೆ ಹಿರಿಯ ಪತ್ರಕರ್ತರು ಗಣೇಶ್ ಕಾಸರಗೋಡು, ಗಾಯತ್ರಿ ಕಾಸರಗೋಡು,ನಟ ನಿರ್ದೇಶಕರಾದಂತಹ ಗಿರಿ ಕೃಷ್ಣ,, ತಾಯಿ ನೀಲಮ್ಮ ಸುರೇಶ್, ಶ್ರೀ ಹೆಚ್.ಎಸ್. ಮಂಜುನಾಥ್( ಆರೋಗ್ಯ ನಿರೀಕ್ಷಣಾಧಿಕಾರಿ ), ಹಿರಿಯ ಕಿರಿಯ ಸಾಹಿತಿಗಳು, ಸಂಘ-ಸಂಸ್ಥೆಯ ಸಂಸ್ಥಾಪಕರು, ಸಮಾಜ ಸೇವಕರು, ಸಂಘಟಕರು ಅಭಿನಂದನೆ ಸಲ್ಲಿಸಿದ್ದಾರೆ.

Ad
Ad
Ad
Nk Channel Final 21 09 2023