Bengaluru 28°C
Ad

ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ತಿರುಪತಿ ಕೇಸ್ ಬೆನ್ನಲ್ಲೇ ಕ್ರಮ

Hassn

ಹಾಸನ:‌ ವಿಶ್ವ ವಿಖ್ಯಾತ ತಿರುಪತಿಯ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಮಿಶ್ರಣ ಆಗಿತ್ತು ಎಂಬ ವಿಚಾರ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.

ಇದರ ಪರಿಣಾಮವಾಗಿ ಹಾಸನಾಂಬೆ ದೇವಾಲಯ ಸಮಿತಿ ಹಾಗೂ ಜಿಲ್ಲಾಡಳಿತ ಕೂಡ ಎಚ್ಚೆತ್ತುಕೊಂಡಿದ್ದು, ಈ ವರ್ಷ ಇಸ್ಕಾನ್ ಸಂಸ್ಥೆ ಮೂಲಕ ಲಡ್ಡು ತಯಾರಿಸಿ ವಿತರಣೆ ಮಾಡಲು ಮುಂದಾಗಿವೆ. ಈ ಮೂಲಕ ಲಡ್ಡು ಗುಣಮಟ್ಟ ಹಾಗು ಪ್ರಾವಿತ್ರ್ಯತೆ ಕಾಪಾಡಿಕೊಳ್ಳಲು ಹಾಸನಾಂಬೆ ದೇವಾಲಯ ಸಮಿತಿ ಹಾಗೂ ಜಿಲ್ಲಾಡಳಿತ ತಯಾರಿ ನಡೆಸಿವೆ.

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿ ಆಕರ್ಷಕ ದೀಪಾಲಂಕಾರ, ಲಾಲ್ ಬಾಗ್ ಮಾದರಿಯ ಪುಷ್ಪಾಲಂಕಾರದ ಮೂಲಕ ಅದ್ದೂರಿ ಹಬ್ಬಾಚರಣೆಗೆ ಸಿದ್ದತೆ ನಡೆದಿದೆ.

ಹಾಸನ ಜಿಲ್ಲಾಡಳಿತ ಸದ್ಯ ಸ್ಥಳೀಯವಾಗಿ ಲಡ್ಡು ತಯಾರು ಮಾಡಲು ನೀಡುತ್ತಿದ್ದ ಟೆಂಡರ್ ರದ್ದುಪಡಿಸಿದೆ. ಬದಲಾಗಿ ಈ ವರ್ಷದಿಂದ ಬೆಂಗಳೂರಿನ ಇಸ್ಕಾನ್ ಸಂಸ್ಥೆ ಮೂಲಕ ಲಡ್ಡು ತಯಾರಿಸಿ ವಿತರಣೆ ಮಾಡಲು ತಯಾರಿ ನಡೆಸಿದೆ. ಈಗಾಗಲೇ ಇಸ್ಕಾನ್ ಸಂಸ್ಥೆ ಜೊತೆಗೆ ಮಾತುಕತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ ಹಾಸನ ಡಿಸಿ ಸಿ ಸತ್ಯಭಾಮ, ಗುಣಮಟ್ಟ ಕಾಪಾಡಿಕೊಳ್ಳುವುದರ ಜೊತೆಗೆ ಪಾವಿತ್ರ್ಯತೆಗೆ ಧಕ್ಕೆ ಆಗದಂತೆ ಎಚ್ಚರ ವಹಿಸಲು ಕ್ರಮ ವಹಿಸಲಾಗುತ್ತಿದೆ. ಈ ಬಗ್ಗೆ ಉಸ್ತುವಾರಿ ಸಚಿವರ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

 

Ad
Ad
Nk Channel Final 21 09 2023