Bengaluru 29°C
Ad

ಹಾಸನ: ಫ್ಯಾನ್ ಮೇಲೆ ಹೆಡೆಬಿಚ್ಚಿ ಬುಸುಗುಟ್ಟಿದ ಸರ್ಪ

ಬೇಸಿಗೆ ಸೆಖೆ ತಣಿಸಲು ಛಾವಣಿಗೆ ಹಾಕಿದ ಮನೆಯ ಸೀಲಿಂಗ್ ಫ್ಯಾನ್ ಮೇಲೆ ಹೆಡೆಬಿಚ್ಚಿದ ನಾಗರಹಾವು ಕುಳಿತು ಬುಸು ಗುಟ್ಟಿದರೆ ಹೇಗಿರಬಹುದು..ನೀವೇ ಹೇಳಿ.

ಹಾಸನ: ಬೇಸಿಗೆ ಸೆಖೆ ತಣಿಸಲು ಛಾವಣಿಗೆ ಹಾಕಿದ ಮನೆಯ ಸೀಲಿಂಗ್ ಫ್ಯಾನ್ ಮೇಲೆ ಹೆಡೆಬಿಚ್ಚಿದ ನಾಗರಹಾವು ಕುಳಿತು ಬುಸು ಗುಟ್ಟಿದರೆ ಹೇಗಿರಬಹುದು..ನೀವೇ ಹೇಳಿ.

ಇಂತಹ ಭಯ, ಭೀತಿ ಹುಟ್ಟಿಸುವ ಸನ್ನಿವೇಶವನ್ನು ಸಕಲೇಶಪುರ ಪಟ್ಟಣದ ಹಳೇ ಸಂತೆವೇರಿ ಬಡಾವಣೆಯ ಕುಟುಂಬವೊಂದು ಎದುರಿಸಿದೆ.

ಸಂತೆವೇರಿ ಬಡಾಣೆಯ ಮನೆಯೊಂದರ ಅಟ್ಟದ ಮೇಲೆ ಅಡಗಿ ಕುಳಿತಿದ್ದ ನಾಗರಹಾವು ಕಂಡು ಭಯಭೀತರಾದ ಮನೆ ಮಂದಿ ಕಿರುಚಾಡಿದರು. ಇದರಿಂದ ಗಾಬರಿಯಾದ ಹಾವು ಅಟ್ಟಕ್ಕೆ ಹೊಂದಿಕೊಂಡಂತೆ ಅಳವಡಿಸಿದ್ದ ಸೀಲಿಂಗ್ ಫ್ಯಾನ್ ಏರಿ ಕುಳಿತುಕೊಂಡಿತು.

ಹಾವನ್ನು ಕೆಳಗಿಳಿಸಲು ಮನೆಯವರು ಫ್ಯಾನ್ ಆನ್ ಮಾಡಿದಾಗ ಸಿಟ್ಟಿನಿಂದ ಹೆಡೆ ಎತ್ತಿದ ಸರ್ಪ ಬುಸುಗುಟ್ಟಿತು. ಮನೆಯವರ ಕೋರಿಕೆ ಮೇರೆಗೆ ಆಗಮಿಸಿದ ಉರುಗ ತಜ್ಞ ದಸ್ತಗೀ ರ್, ಹಾವನ್ನು ಹಿಡಿದು ಕಾಡಿಗೆ ಬಿಟ್ಟರು. ಇದರಿಂದ ಮನೆಯವರು ನಿಟ್ಟುಸಿರು ಬಿಟ್ಟರು. ಹಾವು ತಿರುಗುವ ಫ್ಯಾನ್ ಮೇಲೆ ಕುಳಿತು ಬುಸುಗುಡುವ ವಿಡಿಯೋ ವೈರಲ್ ಈಗ ಆಗಿದೆ.

Ad
Ad
Nk Channel Final 21 09 2023
Ad