Bengaluru 30°C

ಎರಡು ಗುಂಪುಗಳ ಗ್ಯಾಂಗ್‌ ವಾರ್‌ : ರೌಡಿಶೀಟರ್‌ ಕಾಲಿಗೆ ಪೊಲೀಸರು ಗುಂಡೇಟು

ಎರಡು ಗುಂಪುಗಲ ನಡುವೆ ಗ್ಯಾಂಗ್‌ ವಾರ್‌ ನಲ್ಲಿ ಆರೋಪಿಗಳನ್ನು ಹಿಡಿಯಲು  ಹೋದಾಗ ಪೊಲೀಸರ ಮೇಲೆಯೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಅಫ್ತಾಬ್ ಕರಡಿಗುಡ್ಡ ಎಂಬಾತನಿಗೆ ಕಾಲಿಗೆ ಗುಂಡು ಹಾರಿಸಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹುಬ್ಬಳ್ಳಿ:  ಎರಡು ಗುಂಪುಗಲ ನಡುವೆ ಗ್ಯಾಂಗ್‌ ವಾರ್‌ ನಲ್ಲಿ ಆರೋಪಿಗಳನ್ನು ಹಿಡಿಯಲು  ಹೋದಾಗ ಪೊಲೀಸರ ಮೇಲೆಯೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಅಫ್ತಾಬ್ ಕರಡಿಗುಡ್ಡ ಎಂಬಾತನಿಗೆ ಕಾಲಿಗೆ ಗುಂಡು ಹಾರಿಸಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಹಳೇಹುಬ್ಬಳ್ಳಿ ಸದರಸೋಫಾ ಕಟಗರ ಓಣಿಯಲ್ಲಿ ರವಿವಾರ ತಡರಾತ್ರಿ ರೌಡಿಶೀಟರ್‌ ಗಳಾದ ಅಫ್ತಾಬ್ ಕರಡಿಗುಡ್ಡ ಮತ್ತು ಆರೀಫ್ ಜಾವೂರ ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದಿತ್ತು.‌ಈ ಘಟನೆಗೆ ಸಂಬಂಧಿಸಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬುಡರಸಿಂಗ ರಸ್ತೆಯಲ್ಲಿ ಇದ್ದವರನ್ನು ವಶಕ್ಕೆ ಪಡೆಯಲು ಹೋದಾಗ ಅವರ ಮೇಲೆ ಹಲ್ಲೆ ಮಾಡಲು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಹಳೇಹುಬ್ಬಳ್ಳಿ ಠಾಣೆ ಪಿಎಸ್ ಐ ವಿಶ್ವನಾಥ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.


ಸದ್ಯ ಗಾಯಾಳು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಗೆ ಸಂಬಂಧಿಸಿ ಏಳು ಜನರನ್ನು ಬಂಧಿಸಿದ್ದಾರೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


 

 

 

Nk Channel Final 21 09 2023