ಗದಗ: ಮಕ್ಕಳ ಕೂದಲು ಕಟ್ಮಾಡಿದ್ದಕ್ಕೆ ಕಂಪ್ಯೂಟರ್ ಶಿಕ್ಷಕನಿಗೆ ಧರ್ಮದೇಟು ಬಿದ್ದಿದೆ. ಈ ಶಾಲೆಯ ಆರೇಳು ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಕೂದಲು ಬಿಟ್ಟುಕೊಂಡು ಬಂದಿದ್ದರು. ಈ ಹಿನ್ನಲೆ ಕಂಪ್ಯೂಟರ್ ಶಿಕ್ಷಕ ಬೆನೋಯ್ ಎಂಬುವವರು ಶಾಲಾ ಮಕ್ಕಳ ಕೂದಲು ಕಟ್ ಮಾಡಿದ್ದರು ಈ ವೇಳೆ ಏಳನೇಯ ತರಗತಿ ವಿದ್ಯಾರ್ಥಿಯ ಹಣೆಗೆ ಗಾಯವಾಗಿದೆ. ಈ ಕುರಿತು ಮಕ್ಕಳು ಪೋಷಕರ ಮುಂದೆ ಹೇಳಿದ್ದು, ಆರೇಳು ಮಕ್ಕಳ ಪೋಷಕರು ಶಾಲೆಗೆ ಬಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಶಿಕ್ಷಕ ಬೆನೋಯ್ ‘ನಮ್ಮ ಶಾಲೆಯಲ್ಲಿ ರೂಲ್ಸ್ ಇದೆ ಎಂದು ಮಂಡುವಾದ ಮಾಡಿದ್ದಾನೆ. ಹೀಗಾಗಿ ನಿನ್ನ ಕಟಿಂಗ್ ನೋಡು, ನೀನೆ ಸರಿಯಾಗಿ ಕಟಿಂಗ್ ಮಾಡಿಸಿಲ್ಲಾ ಎಂದು, ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ.