Bengaluru 22°C
Ad

ವಿಲಾಸ್ ನಾಂದೋಡ್ಕರ್, ರಘುನಾಥ್​ಗೆ ತೋಂಟದ ಸಿದ್ಧಲಿಂಗ ಶ್ರೀ ಪುರಸ್ಕಾರ

ಜಿಲ್ಲೆಯ ಡಂಬಳ ಗ್ರಾಮದ ತೋಂಟದಾರ್ಯ ಪುರಸ್ಕಾರ ಸಮಿತಿ ಲಿಂ. ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ನೆನಪಿಗಾಗಿ ಪ್ರತಿವರ್ಷ ನೀಡುವ ರಾಜ್ಯಮಟ್ಟದ ಡಾ.ತೋಂಟದ ಸಿದ್ಧಲಿಂಗ ಶ್ರೀ ಪುರಸ್ಕಾರಕ್ಕೆ ಟಿವಿ9 ವಾಹಿನಿಯ ಇನ್​​ಪುಟ್​ ಹೆಡ್​​, ಪ್ರಧಾನ ಕಾರ್ಯಕ್ರಮ ನಿರ್ಮಾಪಕರಾದ ವಿಲಾಸ್ ನಾಂದೋಡ್ಕರ್ ಹಾಗೂ ಸುಧಾ, ಮಯೂರ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರಘುನಾಥ ಚ.ಹ ಆಯ್ಕೆಯಾಗಿದ್ದಾರೆ.

ಗದಗ : ಜಿಲ್ಲೆಯ ಡಂಬಳ ಗ್ರಾಮದ ತೋಂಟದಾರ್ಯ ಪುರಸ್ಕಾರ ಸಮಿತಿ ಲಿಂ. ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ನೆನಪಿಗಾಗಿ ಪ್ರತಿವರ್ಷ ನೀಡುವ ರಾಜ್ಯಮಟ್ಟದ ಡಾ.ತೋಂಟದ ಸಿದ್ಧಲಿಂಗ ಶ್ರೀ ಪುರಸ್ಕಾರಕ್ಕೆ ಟಿವಿ9 ವಾಹಿನಿಯ ಇನ್​​ಪುಟ್​ ಹೆಡ್​​, ಪ್ರಧಾನ ಕಾರ್ಯಕ್ರಮ ನಿರ್ಮಾಪಕರಾದ ವಿಲಾಸ್ ನಾಂದೋಡ್ಕರ್ ಹಾಗೂ ಸುಧಾ, ಮಯೂರ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರಘುನಾಥ ಚ.ಹ ಆಯ್ಕೆಯಾಗಿದ್ದಾರೆ.

Ad
300x250 2

ಪ್ರಶಸ್ತಿ ಗೌರವ ತಲಾ 5000 ನಗದು ಬಹುಮಾನ, ಗೌರವ ಫಲಕ ಹೊಂದಿದ್ದು ಜುಲೈ ತಿಂಗಳಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪುರಸ್ಕಾರ ಸಮಿತಿಯ ಸಂಚಾಲಕರಾದ ಡಾ. ಶಶಿಧರ್ ತೋಡ್ಕರ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಧಾರವಾಡ ಹಾಗೂ ತುಮಕೂರು ಜಿಲ್ಲೆಯವರಾದ ಇಬ್ಬರೂ ಹಿರಿಯ ಪತ್ರಕರ್ತರು ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಪತ್ರಕರ್ತ ವೃತ್ತಿಯ ಜೊತೆಗೆ ಸಾಹಿತಿಯಾಗಿಯೂ ಗುರುತಿಸಿಕೊಂಡ ರಘುನಾಥ ಚ.ಹ ಅವರು 10ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಹೆಸರಾದವರು.

Ad
Ad
Nk Channel Final 21 09 2023
Ad