ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 70,795 ಕೋಟಿ ರು. ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಆಕರ್ಷಿಸುವ ಮೂಲಕ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ. 19059 ಕೋಟಿ ರು. ಹೂಡಿಕೆಯೊಂದಿಗೆ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದು ಕೈಗಾರಿಕೆ ಹಾಗೂ ದೇಶೀಯ ವ್ಯಾಪಾರ ಉತ್ತೇಜನಾ ಇಲಾಖೆಯು ಅಂಕಿ -ಅಂಶ ಬಿಡುಗಡೆ ಮಾಡಿದೆ.
ಕರ್ನಾಟಕ 2ನೇ ಸ್ಥಾನದಲ್ಲಿದ್ದರೂ, ಪ್ರಥಮ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಆಗಿರುವ ಹೂಡಿಕೆಯನ್ನು ಗಮನಿಸಿದರೆ 3 ಪಟ್ಟುಗೂ ಕಡಿಮೆ ಹೂಡಿಕೆ ಕರ್ನಾಟಕದಲ್ಲಿ ಆಗಿದೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶಕ್ಕೆ ಬಂದಿರುವ ಒಟ್ಟಾರೆ ಎಫ್ ಡಿಐ ಪೈಕಿ ಶೇ.52ರಷ್ಟು ಮಹಾರಾಷ್ಟ್ರಕ್ಕೇ ಹೋಗಿದೆ.
ರಾಜ್ಯ ಹೂಡಿಕೆ ಮೊತ್ತ (ಕೋಟಿ ₹ಗಳಲ್ಲಿ)
1. ಮಹಾರಾಷ್ಟ್ರ 70795
2. ಕರ್ನಾಟಕ 19059
3. ದೆಹಲಿ. 10788
4. ತೆಲಂಗಾಣ 9023
5. ಗುಜರಾತ್ 8508
6. ತಮಿಳುನಾಡು 581
Ad