Ad

ಸಹೋದರಿ ಗೌರಿ ನೆನಪಿಗಾಗಿ ಸಿನಿಮಾಕ್ಕೆ ಗೌರಿ ಟೈಟಲ್ ಇಡಲಾಗಿದೆ : ಲಂಕೇಶ್

ಯುವ ನಟ ಸಮರ್ಜಿತ್ ಹಾಗೂ ನಾಯಕಿ ಸಾನ್ಯ ಅಯ್ಯರ್ ಅವರ ಅಭಿನಯದ, ಗೌರಿ ಸಿನಿಮಾ ರಾಜ್ಯದಾದ್ಯಂತ ಜುಲೈ ತಿಂಗಳಲ್ಲಿ ತೆರೆ ಕಾಣಲಿದ್ದು, ನಮ್ಮ ಸಹೋದರಿ ಗೌರಿ ನೆನಪಿಗಾಗಿ ಸಿನಿಮಾಕ್ಕೆ ಗೌರಿ ಟೈಟಲ್ ಇಡಲಾಗಿದೆ ಎಂದು ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಹೇಳಿದರು.

ಹುಬ್ಬಳ್ಳಿ: ಯುವ ನಟ ಸಮರ್ಜಿತ್ ಹಾಗೂ ನಾಯಕಿ ಸಾನ್ಯ ಅಯ್ಯರ್ ಅವರ ಅಭಿನಯದ, ಗೌರಿ ಸಿನಿಮಾ ರಾಜ್ಯದಾದ್ಯಂತ ಜುಲೈ ತಿಂಗಳಲ್ಲಿ ತೆರೆ ಕಾಣಲಿದ್ದು, ನಮ್ಮ ಸಹೋದರಿ ಗೌರಿ ನೆನಪಿಗಾಗಿ ಸಿನಿಮಾಕ್ಕೆ ಗೌರಿ ಟೈಟಲ್ ಇಡಲಾಗಿದೆ ಎಂದು ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಹೇಳಿದರು.

Ad
300x250 2

ನಗರದಲ್ಲಿಂದು ಸಿನಿಮಾ ಹಾಡೊಂದು ರಿಲೀಸ್ ಮಾಡಿ ನಂತರ ಮಾತನಾಡಿದ ಅವರು, ನನ್ನ ಪುತ್ರ ಸಮರ್ಜಿತ ಹಾಗೂ ಸಾನ್ಯ ಅಯ್ಯರ್ ಗೆ ಇದು ಚೊಚ್ಚಲ ಸಿನಿಮಾವಾಗಿದ್ದು, ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿಹಿಧೆ ಚಿತ್ರೀಕರಣ ಮಾಡಲಾಗಿದ್ದು, ಅಕ್ಕ ಗೌರಿಯ ಸಿದ್ದಾಂತ ಇದರಲ್ಲಿಯಿಲ್ಲ. ಇದು ಅಕ್ಕ ಗೌರಿಯ ಕಥೆಯೂ ಅಲ್ಲ. ಅಕ್ಕನ ಮೇಲಿನ ಅಭಿಮಾನದಿಂದ ಸಿನಿಮಾಗೆ ಆಕೆಯ ಹೆಸರು ಇಟ್ಟಿದ್ದೇನೆಂದರು. ಇನ್ನೂ ಚಿತ್ರದಲ್ಲಿ ಲೂಸ್ ಮಾದ ಯೋಗಿ, ಪ್ರಿಯಾಂಕಾ ಉಪೇಂದ್ರ, ಅಕುಲ್ ಬಾಲಾಜಿ ಸೇರಿದಂತೆ ಮೊದಲಾದ ಕಲಾವಿದರು ಅಭಿನಯಿಸಿದ್ದಾರೆ ಎಂದರು

Ad
Ad
Nk Channel Final 21 09 2023
Ad