ಹುಬ್ಬಳ್ಳಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 26 ಸೋಮವಾರ ಮೊಸರಿನ ಗಡಿಗೆಯನ್ನು ಒಡೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಹುಬ್ಬಳ್ಳಿಯ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ಆಗಸ್ಟ್ 26ಕ್ಕೆ ಮುಂಜಾನೆ 11ಕ್ಕೆ ಮೊಸರಿನ ಗಡಿಗೆಯನ್ನು ಒಡೆಯುವ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ್, ಎಮ್ ಆರ್ ಪಾಟೀಲ್, ಮೇಯರ್ ರಾಮಣ್ಣ ಬಡಿಗೇರ, ಉಪ ಮಹಾಪೌರರು ದುರ್ಗಮ್ಮ ಬಿಜವಾಡ, ತಿಪ್ಪಣ್ಣ ಮಜ್ಜಿಗಿ, ಗೋವರ್ಧನ್ ರಾವ್, ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಲಿದ್ದಾರೆ.
ಈಗಾಗಲೇ ಐದು ತಂಡಗಳು ಹೆಸರನ್ನು ನೊಂದಾಯಿಸಿದ್ದಾರೆ. ಚಿಕ್ಕ ಮಕ್ಕಳು ರಾಧಾಕೃಷ್ಣ ವೇಶಧಾರಿಗಳು, ಹೆಣ್ಣು ಮಕ್ಕಳ ಡೊಳ್ಳು ಕುಣಿತ, ಗೊಂಬೆ ಕುಣಿತ, ಬೃಹತ್ ಮೆರವಣಿಗೆ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆಂದು ಉತ್ಸವ ಸಮಿತಿ ತಿಳಿಸಿದೆ.