ಹುಬ್ಬಳ್ಳಿ: ರಾಜ್ಯಪಾಲರು ಸಾಕಷ್ಟು ಸಮಯ ತೆಗೆದುಕೊಂಡು ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟಿದ್ದಾರೆ. ಕಾನೂನು ಸಲಹೆ ಪಡೆದು ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರ ಈ ಕ್ರಮ ಯಾವುದೇ ವ್ಯಕ್ತಿಯ ಸಾರ್ವಜನಿಕ ಬದುಕಲ್ಲಿ ಶುದ್ದತೆ ಕಾಪಾಡಲು ಬಹುದೊಡ್ಡ ಹೆಜ್ಜೆ. ಯಾರೇ ಇದ್ರೂ ಸಹಿತ ಉನ್ನತ ಸ್ಥಾನದಲ್ಲಿದ್ದಾಗ, ಆರೋಪ ಬಂದಾಗ ತನಿಖೆ ಆಗಬೇಕು. ಸಮಗ್ರ ತನಿಖೆ ಆಗಬೇಕು ಎಲ್ಲ ರೀತಿಯ ಕ್ರಮ ಆಗಬೇಕೆಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು
ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಗಂಭೀರ ಸ್ವರೂಪದ ಆರೋಪ ಬಂದ ಹಿನ್ನಲೆ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದೆ. ಭ್ರಷ್ಟಾಚಾರ ಮಾಡಬೇಕಾದ್ರೆ ಭಯ ಇರಬೇಕು. ಹೀಗಾಗಿ ಅಳೆದು ತೂಗಿ ಪ್ರಾಸಿಕ್ಯೂಶನ್ ಗೆ ಅನುಮತಿ. ಸಿದ್ದರಾಮಯ್ಯ ತನಿಖೆಗೆ ಸಹಕಾರ ಕೊಡ್ತಾರೆ ಅನ್ನೋ ಭರವಸೆ ಇದೆ.
ಸಿದ್ದರಾಮಯ್ಯ ತಪ್ಪು ಮಾಡಲ್ಲ ಅಂತಾದ್ರೆ ಏನೂ ತೊಂದರೆ ಆಗಲ್ಲ. ಯಾವುದೇ ಭಯ ಪಡೋ ಅಗತ್ಯ ಇಲ್ಲ. ಸಿದ್ದರಾಮಯ್ಯ ತನಿಖೆಗೆ ಅಡತಡೆ ಮಾಡಬಾರದು. ಅವರು ಕಾನೂನು ಹೋರಾಟ ಮಾಡಲಿ,ನಾವ ಬೇಡಾ ಅಂದಿಲ್ಲ.ಕಾನೂನು ಹೋರಾಟ ಮಾಡಲು ನಮ್ದು ತಕಾರಿಲ್ಲ. ಕಾನೂನಿನ ನೆಪ ಇಟ್ಕೊಂಡು ತನಿಖೆಗೆ ಅಡ್ಡಮಾಡಬಾರದು ಎಂದರು.