Bengaluru 28°C
Ad

ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ಮಹಾರಾಜರು ಇನ್ನಿಲ್ಲ

Swamij

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರ ಕಲ್ಯಾಣ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ರಘುವೀರಾನಂದ ಮಹಾರಾಜರು (60 ವ) ಸೋಮವಾರ (ಸೆ.23) ಬೆಳಗ್ಗೆ 10 ಗಂಟೆಗೆ ಸುಮಾರಿಗೆ ರಾಮಕೃಷ್ಣ ಚರಣದಲ್ಲಿ ಲೀನರಾದರು.

ಶ್ರೀ ಸ್ವಾಮಿ ರಘುವೀರಾನಂದ ಮಹಾರಾಜರ ಪಾರ್ಥಿವ ಶರೀರವನ್ನು ಭಕ್ತರ ದರ್ಶನಕ್ಕೆಂದು ಆಶ್ರಮದ ಆವರಣದಲ್ಲಿ ಇಡಲಾಗಿದೆ.

ಈ ಸಂದರ್ಭದಲ್ಲಿ ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪರಮಪೂಜ್ಯ ವಿಜಯಾನಂದ ಸರಸ್ವತಿ, ಹುಬ್ಬಳ್ಳಿಯ ಸ್ವಾಮಿ ಬುದ್ಧಿಯೋಗಾನಂದಜಿ ಮಹಾರಾಜ, ತೇಜಸಾನಂದಜಿ ಮಹಾರಾಜ, ಹರಿದ್ವಾರದ ಪ್ರಣವಾನಂದ ಸರಸ್ವತಿ, ರಾಣಿಬೆನ್ನೂರಿನ ಆತ್ಮದೀಪಾನಂದಜಿ ಮಹಾರಾಜ, ಗುರುದೇವ ಚರಣಾನಂದಜಿ ಮಹಾರಾಜ, ಮಾತಾ ಆಶ್ರಮದ ಮಾತಾ ತೇಜೋಮಯಿ, ಅಮೂಲ್ಯಮಯಿ, ಆಶ್ರಮದ ಧರ್ಮದರ್ಶಿ ಸಂಭಾಜಿ ಕಲಾಲ, ಪರಮ ಭಕ್ತರಾದ ಎಂ.ಎ. ಸುಬ್ರಹ್ಮಣ್ಯ, ನಾಗಲಿಂಗ ಮೂರಗಿ, ಸಂಗಣ್ಣ ಬೆಳಗಾವಿ, ಶರಣಪ್ಪ ಕೊಟಗಿ, ಮಹೇಶ ದ್ಯಾವಪ್ಪನವರ, ಕೆಎಲ್‌ಇ ಎಫ್‌ಎಂನ ಗೋಪಾಲ ಹೆಗಡೆ, ಡಾ. ನವೀನ ಕಬ್ಬೂರ, ದಯಾನಂದ ರಾವ್,‌ ಡಾ. ರಾಮು ಮೂಲಗಿ ಸೇರಿದಂತೆ ಆಶ್ರಮದ ಅಪಾರ ಭಕ್ತ ವೃಂದ ಸೇರಿದ್ದಾರೆ.

ಶ್ರೀ ಸ್ವಾಮಿ ರಘುವೀರಾನಂದ ಮಹಾರಾಜರ ಅಂತ್ಯಸಂಸ್ಕಾರವು ಸೆ. 24ರಂದು ಬೆಳಗ್ಗೆ 10 ಗಂಟೆಗೆ ಕೇಶ್ವಾಪುರದ ಮುಕ್ತಿಧಾಮದಲ್ಲಿ ರಾಮಕೃಷ್ಣ ಆಶ್ರಮದ ಪರಂಪರೆಯಂತೆ ನಡೆಯಲಿದೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.

Ad
Ad
Nk Channel Final 21 09 2023