Ad

ಧಾರವಾಡದಲ್ಲಿ ನಕಲಿ ಮದ್ಯ ಮಾರಾಟ: 33 ಲಕ್ಷ ಮೌಲ್ಯದ ಮದ್ಯ ವಶಕ್ಕೆ

ಬೇರೆ ರಾಜ್ಯದಿಂದ ಅಕ್ರಮವಾಗಿ ಮದ್ಯವನ್ನು ತಂದು ಆ ಮದ್ಯಕ್ಕೆ ಬೇರೆ ಮಿಶ್ರಣ ಮಾಡಿ ಪ್ರತಿಷ್ಠಿತ ಕಂಪನಿಯ ಹೆಸರಿನಲ್ಲಿ ನಕಲಿ ಮದ್ಯವನ್ನು ರೆಡಿ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿ 33 ಲಕ್ಷ ಮೌಲ್ಯದ ನಕಲಿ ಮದ್ಯವನ್ನು ಸೀಜ್ ಮಾಡುವಲ್ಲಿ ಧಾರವಾಡ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡ: ಬೇರೆ ರಾಜ್ಯದಿಂದ ಅಕ್ರಮವಾಗಿ ಮದ್ಯವನ್ನು ತಂದು ಆ ಮದ್ಯಕ್ಕೆ ಬೇರೆ ಮಿಶ್ರಣ ಮಾಡಿ ಪ್ರತಿಷ್ಠಿತ ಕಂಪನಿಯ ಹೆಸರಿನಲ್ಲಿ ನಕಲಿ ಮದ್ಯವನ್ನು ರೆಡಿ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿ 33 ಲಕ್ಷ ಮೌಲ್ಯದ ನಕಲಿ ಮದ್ಯವನ್ನು ಸೀಜ್ ಮಾಡುವಲ್ಲಿ ಧಾರವಾಡ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

Ad
300x250 2

ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಕ್ರಾಸ್ ಬಳಿಯಲ್ಲಿನ ಗೋಡೌನ್ ನಲ್ಲಿ ನಕಲಿ ಮದ್ಯ ತಯಾರು ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿ ಕಲಘಟಗಿ ಠಾಣೆಯ ಇನ್ಸ್‌ ಪೆಕ್ಟರ್ ಶ್ರೀಶೈಲ ಕೌಜಲಗಿ ನೇತೃತ್ವದ ತಂಡ ದಾಳಿ ಮಾಡಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ 33 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕರು ಆರೋಪಿಗಳು ಹುಬ್ಬಳ್ಳಿ ಮೂಲದವರು ಅಂತಾ ತಿಳಿದು ಬಂದಿದ್ದು, ಆರೋಪಿಗಳು ಗೋವಾದಿಂದ ಮದ್ಯವನ್ನು ರಾಜ್ಯಕ್ಕೆ ಹೇಗೆ ತರುತ್ತಿದ್ದರು, ಹಾಗೆಯೇ ಇಲ್ಲಿ ಆ ಮದ್ಯಕ್ಕೆ ಬೇರೆ ಕೆಮಿಕಲ್ ಸೇರಿಸಿ ಪ್ರತಿಷ್ಠಿತ ಮದ್ಯದ ಕಂಪನಿ ಹೆಸರಿನಲ್ಲಿ ಎಲ್ಲಿ ಮಾರುತ್ತಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

Ad
Ad
Nk Channel Final 21 09 2023
Ad