Bengaluru 27°C
Ad

6ನೇ ವಯಸ್ಸಿನಲ್ಲಿಯೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದುಕೊಂಡ ಸಮೃದ್ಧಿ

ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ. ಈ ಪುಟ್ಟ ಬಾಲಕಿಯ ಸಾಧನೆಗಳನ್ನು ಕೇಳಿದರೆ ಎಲ್ಲರೂ ಹುಬ್ಬು ಏರಿಸುವುದು ಗ್ಯಾರೆಂಟಿ. ಆಟ, ಮೋಜು, ಮಸ್ತಿ ಅಂತಾ ವಿರಬೇಕಾದ ಈ ಪುಟ್ಟ ಫೋರಿ ತನ್ನ ಹೆಸರನ್ನು ಅಚ್ಚಳ್ಳಿಯಾಗಿ ವಿರುವಂತೆ ಮಾಡುತೀದ್ದಾಳೆ.

ಹುಬ್ಬಳ್ಳಿ: ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ. ಈ ಪುಟ್ಟ ಬಾಲಕಿಯ ಸಾಧನೆಗಳನ್ನು ಕೇಳಿದರೆ ಎಲ್ಲರೂ ಹುಬ್ಬು ಏರಿಸುವುದು ಗ್ಯಾರೆಂಟಿ. ಆಟ, ಮೋಜು, ಮಸ್ತಿ ಅಂತಾ ವಿರಬೇಕಾದ ಈ ಪುಟ್ಟ ಫೋರಿ ತನ್ನ ಹೆಸರನ್ನು ಅಚ್ಚಳ್ಳಿಯಾಗಿ ವಿರುವಂತೆ ಮಾಡುತೀದ್ದಾಳೆ. ಅಷ್ಟೇ ಅಲ್ಲದೆ ಹುಬ್ಬಳ್ಳಿ ಧಾರವಾಡದ ಹೆಸರನ್ನು ಇನ್ನಷ್ಟು ಉತ್ತಂಗ ಮಟ್ಟಕ್ಕೆ ಏರಿಸುತ್ತೀದ್ದಾಳೆ ಈ ಸುಂದರಿ. ಅದು ಯಾರು ಅಂತೀರಾ ಈ ಸ್ಟೋರಿ ನೋಡಿ.

ಹೌದು, ಸಾಕಷ್ಟು ಪ್ರಶಸ್ತಿಗಳು, ಹೇಳಾಲಾರದಷ್ಟು ಸನ್ಮಾನಗಳು , ಹಲವಾರು ರಾಜ್ಯಗಳ ಪ್ರಯಾಣ‌ ಮಾಡಿದ ಬೆಡಗಿಯ ಹೆಸರು ಸಮೃದ್ಧಿ. ಈಕೇಗೆ ಕೇವಲ 8 ವರ್ಷ. ಈ ಪುಟ್ಟ ಬಾಲಕಿಗೆ ಮಲ್ಟಿ ಟ್ಯಾಲೆಂಟ್ ಡ್ ಅಂದ್ರು ತಪ್ಪಾಗಲಾರದು.

ಈಗಾಗಲೇ ಗೋವಾ, ಇಂದೋರ್, ಭೋಪಾಲ್, ದೆಹಲಿ, ಹೀಗೆ ಹತ್ತು ಹಲವಾರು ಊರುಗಳಲ್ಲಿ ತನ್ನ ಛಾಪು ಮೂಡಿಸಿ ಗೌರವನ್ನು ಪಡೆದುಕೊಂಡಿದ್ದಾಳೆ. ಎಲ್ಲರ ಗಮನ ಸೆಳೆಯಲು ಆಟಪಾಠ, ಕಲೆ, ಚಿತ್ತಕಲೆ, ನೃತ್ಯ, ಸಂಗೀತ, ವಾದ್ಯಗಾರಿಕೆ ಇನ್ನು ಹತ್ತು ಹಲವಾರು ಕಲೆಗಳನ್ನು ಪಳಗಿಸಿಕೊಂಡಿದ್ದಾಳೆ.

ಅಷ್ಟೇ ಅಲ್ಲದೆ ಇದೀಗ” Third eye” ಎಂಬ ವಸ್ತುಗಳನ್ನು ಪ್ರದರ್ಶಿಸಲು ಮುಂದಾಗಿದ್ದಾಳೆ. ಇದಕ್ಕೆ ಗಾಂಧಾರಿ ವಿದ್ಯೆ ಎಂಬ ಇನ್ನೊಂದು ಹೆಸರು. ಅಂದರೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಲ್ಲ ವಿಷಯಗಳ ಬಗ್ಗೆ ತಿಳಿಯುವುಂತಹ ವಿದ್ಯೆ.

ವ್ಯಕ್ತಿಯ ದೇಹ ಪರೀಕ್ಷೆ ಮಾಡಿ ಅವರ ಉಡುಗೆ ತೊಡುಗೆ ಬಗ್ಗೆ ತಿಳಿಸುತ್ತಾಳೆ, ಚಿತ್ರ ಬಿಡಿಸುವುದು, ಬಣ್ಣವನ್ನು ಚಿತ್ರಗಳಿಗೆ ಹಾಕುವುದು, ಬಾಕ್ಸ್ ನಲ್ಲಿ ವಿರುವ ವಸ್ತು ಗುರುತ್ತಿಸುವುದು. ಬೇರೆ ವ್ಯಕ್ತಿಯ ಮೊಬೈಲ್ ಗ್ಯಾಲರಿಯನ್ನು ತೆಗೆದು ಅವರು ಹೇಳುವ ವ್ಯಕ್ತಿ ಅಥವಾ ವಸ್ತು ಗುರುತ್ತಿಸುವುದು. ಮೇಸೆಜ್ ಓದುವುದು. ಚೆಸ್ ಆಡುವುದು, ಸೈಕಲ್ ಓಡಿಸುವುದು, ನೋಟಿನ ಬಣ್ಣ, ನಂಬರ್ ಹೇಳುವುದು, ಕನ್ನಡ, ಹಿಂದಿ, ಇಂಗ್ಲಿಷ್, ಭಾಷೆಯ ಪೇಪರ್ ಓದುವುದು ಹೀಗೆ ಹತ್ತು ಹಲವಾರು ವಿದ್ಯೆ ಯನ್ನು ಪಳಗಿಸಿಕೊಂಡಿದ್ದಾಳೆ.

ಇನ್ನೊಂದು ವಿಶೇಷವೆಂದರೆ ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಸುಮಾರು 4 ರಿಂದ 5 ವಾರಗಳು ಬೇಕಾಗುವುದು. ಆದರೆ ಈಕೇ ಕೇವಲ 2 ದಿನಗಳಲ್ಲಿ ಈ ವಿದ್ಯೆಯನ್ನು ಕಲಿತ ವಿಶೇಷ ಬಾಲಕಿಯಾಗಿ ಹೊರಹೊಮ್ಮಿದ್ದಾಳೆ.

ಸಮೃದ್ಧಿ 6ನೇ ವಯಸ್ಸಿನಲ್ಲಿಯೇ “World book of Records ” ಎಂಬ ಪಟ್ಟ ಮುಡಿಗೇರಿಸಿಕೊಂಡಿದ್ದಾಳೆ. Hula hoops ಎಂಬ ಕ್ರೀಡೆಯಲ್ಲಿ ಇದೀಗ World record ಮಾಡಲು ಹೊರಟಿದ್ದಾಳೆ.ಇತ್ತೀಚೆಗೆ ಕರ್ನಾಟಕ ಸರ್ಕಾರ ಜಿಲ್ಲಾ ಮಟ್ಟದಲ್ಲಿ ನೀಡಲಾಗುವ “ಅಸಾಧಾರಣ ಪ್ರತಿಭಾ ಪುರಸ್ಕಾರ” ಹಾಗೂ ಗೋವಾದಲ್ಲಿ “ಭಾರತೀಯ ಛಾತ್ರರತ್ನ ಪುರಸ್ಕಾರ” ದೊರತಿದೆ. ಹೀಗೆ ಇನ್ನೂ ಹತ್ತು ಹಲವಾರು ಸಾಧನೆಗಳನ್ನು ಮಾಡಿ ಅವಳ ಹೆಸರು ಇಡೀ ದೇಶದಲ್ಲಿ ಹೆಸರುವಾಸಿ ಆಗಲಿ. ಅವಳ ಹೆಸರಂತೆ ಸಮೃದ್ಧಿ ಯೂ ಅವಳ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಯನ್ನು ಹೊಂದಲಿ.

Ad
Ad
Nk Channel Final 21 09 2023
Ad