ಧಾರವಾಡ: ರಕ್ಷಾ ಬಂಧನ ಹಬ್ಬವನ್ನ ಭಾರತದಲ್ಲಿ ಬಹಳ ಜೋರಾಗಿಯೇ ಆಚರಿಸಲಾಗುತ್ತದೆ. ಸಹೋದರ ಹಾಗೂ ಸಹೋದರಿಯರ ನಡುವಿನ ಬಾಂಧವ್ಯವನ್ನ ಗಟ್ಟಿ ಮಾಡುವ ಹಬ್ಬ ಇದು ಎನ್ನಬಹುದು.ಇನ್ನು ರಕ್ಷಾ ಬಂಧನ ಹಬ್ಬವನ್ನು ಧಾರವಾಡದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಗಳು ರಕ್ಷಾಬಂಧನವನ್ನು ಕಟ್ಟಿಕೊಳ್ಳುವುದರ ಮೂಲಕ ವಿಶೇಷವಾಗಿ ಆಚರಿಸಿದರು.
ಶಾಲೆಯಲ್ಲಿ ವಿದ್ಯಾರ್ಥಿಗಳು ಪರಸ್ಪರ ರಕ್ಷಾ ಬಂಧನ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು. ಶಿಕ್ಷಕರು ವಿದ್ಯಾರ್ಥಿಗಳಿಗೆ ರಕ್ಷಾಬಂಧನ ಹಬ್ಬದ ಇತಿಹಾಸವನ್ನು ಹಾಗೂ ಪ್ರಾಮುಖ್ಯತೆಯ ಕುರಿತು ಮನವರಿಕೆ ಮಾಡಿ, ರಕ್ಷಾ ಬಂಧನ ಹಬ್ಬವನ್ನು ವಿಶೇಷವಾಗಿ ಆಚರಿಸಿ ಗಮನ ಸೆಳೆದರು.