Ad

ಧಾರವಾಡ : ಅಲೆಮಾರಿ ಜನಾಂಗಕ್ಕೆ ಉಳುಮೆ ಮಾಡಲು ಜಮೀನು ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಅಲೆಮಾರಿ ಜನಾಂಗಕ್ಕೆ ಉಳುಮೆ ಮಾಡಲು ಜಮೀನು ನೀಡುವಂತೆ ಆಗ್ರಹಿಸಿ ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾದ ವತಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಧಾರವಾಡ: ಅಲೆಮಾರಿ ಜನಾಂಗಕ್ಕೆ ಉಳುಮೆ ಮಾಡಲು ಜಮೀನು ನೀಡುವಂತೆ ಆಗ್ರಹಿಸಿ ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾದ ವತಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಅಲೆಮಾರಿ ಜನಾಂಗದವರೇ ವಾಸ ಮಾಡುತ್ತಿದ್ದಾರೆ. ಘಂಟಿಚೋರ, ಸುಡುಗಾಡು ಸಿದ್ಧರು, ಕೊರಮ ಹಾಗೂ ಸಿಂಧೋಳಿ ಜನಾಂಗದ ಜನ ವಾಸ ಮಾಡುತ್ತಿದ್ದು, ಸರ್ಕಾರಿ ಜಮೀನನ್ನು ಉಳುಮೆ ಮಾಡಲು ಈ ಜನಾಂಗದವರಿಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಈಗಾಗಲೇ ಜಮೀನು ಗುರುತಿಸಿದ್ದು, ಅಲ್ಲೇ ಅಲೆಮಾರಿ ಜನಾಂಗಕ್ಕೆ ಜಮೀನು ನೀಡಬೇಕು. ಅಲೆಮಾರಿ ಜನಾಂಗದ ಹೆಣ್ಣು ಮಕ್ಕಳ ಹೆಸರಿನಲ್ಲಿ ಜಮೀನು ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Ad
Ad
Nk Channel Final 21 09 2023