Ad

ಫೀಲ್ಡ್‌ಗೆ ಇಳಿದ ಸಂಚಾರಿ ಠಾಣೆ ಪೊಲೀಸರು: 32 ಪ್ರಕರಣ ದಾಖಲು

ಕಮಿಷನ‌ರ್ ಶಶಿಕುಮಾರ್ ಹಾಗೂ ಸಂಚಾರಿ ವಿಭಾಗದ ಡಿಸಿಪಿ ರವೀಶ್‌ ಸೂಚನೆ ಮೇರೆಗೆ ಫೀಲ್ಡ್‌ಗೆ ಇಳಿದ ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಠಾಣೆಯ ಇನ್ಸ್‌ಪೆಕ್ಟರ್‌ ಮರಳು ಸಿದ್ದಪ್ಪ 9 ಪ್ರಕರಣ ದಾಖಲಾಗಿದೆ. 

ಹುಬ್ಬಳ್ಳಿ: ಕಮಿಷನ‌ರ್ ಶಶಿಕುಮಾರ್ ಹಾಗೂ ಸಂಚಾರಿ ವಿಭಾಗದ ಡಿಸಿಪಿ ರವೀಶ್‌ ಸೂಚನೆ ಮೇರೆಗೆ ಫೀಲ್ಡ್‌ಗೆ ಇಳಿದ ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಠಾಣೆಯ ಇನ್ಸ್‌ಪೆಕ್ಟರ್‌ ಮರಳು ಸಿದ್ದಪ್ಪ 9 ಪ್ರಕರಣ ದಾಖಲಾಗಿದೆ.

ಉತ್ತರ ಸಂಚಾರಿ ಠಾಣೆಯ ಇನ್ಸ್‌ಪೆಕ್ಟ‌ರ್ ರಮೇಶ ಗೋಕಾಕ 8 ಪ್ರಕರಣ ದಾಖಲಾಗಿದೆ. ಪೂರ್ವ ಸಂಚಾರಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಜಾಕ್ಸನ್ ಡಿಸೋಜಾ 8 ಪ್ರಕರಣ ಹಾಗೂ ಧಾರವಾಡ ಸಂಚಾರಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಶ್ರೀನಿವಾಸ್‌ ಮೇಟಿ 7 ಪ್ರಕರಣ ಸೇರಿ ಒಟ್ಟು 32 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.

ನಿನ್ನೆ ಒಂದೇ ರಾತ್ರಿ ಸಂಚಾರಿ ಪೊಲೀಸರು ಸುಮಾರು 320000 ರೂಪಾಯಿ ಕೇವಲ ಡ್ರಿಂಕ್ & ಡ್ರೈವ್ ಕೇಸ್‌ನಲ್ಲಿ ದಂಡವನ್ನು ವಸೂಲಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಾರ್ವಜನಿಕರಿಗೆ ಸಂಚಾರಿ ಪೊಲೀಸರು ಸಂಚಾರಿ ನಿಯಮಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರು ಕೂಡಾ ವಾಹನ ಸವಾರರು ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಡ್ರಿಂಕ್ & ಡ್ರೈವ್ ಕೇಸ್ ಪ್ರಕರಣಗಳ ಭೇಟಿ ಪೊಲೀಸರು ಫೀಲ್ಡ್‌ ಗೆ ಇಳಿದಿದ್ದಾರೆ.

Ad
Ad
Nk Channel Final 21 09 2023