Ad

ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದ ಡಬ್ಬಾ ಅಂಗಡಿಗಳ ತೆರವು

ಅನಧಿಕೃತವಾಗಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ಸಾರ್ವಜನಿಕರ ವಲಯದಲ್ಲಿ ತೊಂದರೆಯಾಗುತ್ತಿದ್ದನ್ನು ಗಮನಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 5 ರ ಆಯುಕ್ತರಾ ಗಿರೀಶ್ ತಳವಾರು ಅವರು ಇಂದು ಡಬ್ಬಾ ಅಂಗಡಿಗಳನ್ನು ತೆರವು ಮಾಡಿಸಿದರು.

ಹುಬ್ಬಳ್ಳಿ: ಅನಧಿಕೃತವಾಗಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ಸಾರ್ವಜನಿಕರ ವಲಯದಲ್ಲಿ ತೊಂದರೆಯಾಗುತ್ತಿದ್ದನ್ನು ಗಮನಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 5 ರ ಆಯುಕ್ತರಾ ಗಿರೀಶ್ ತಳವಾರು ಅವರು ಇಂದು ಡಬ್ಬಾ ಅಂಗಡಿಗಳನ್ನು ತೆರವು ಮಾಡಿಸಿದರು.

Ad
300x250 2

ವಾರ್ಡ ನಂಬರ 47 ರಲ್ಲಿ ಬರುವ ಕಿಮ್ಸ್ ಆಸ್ಪತ್ರೆ ಹಿಂಬದಿಯ ರಸ್ತೆಯಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿನ ಪಕ್ಕದಲ್ಲಿ ಆಂಬ್ಯುಲೆನ್ಸ್, ಪಾದಚಾರಿಗಳಿಗೆ ಹೋಗು ವಾಹನಗಳ ಸಂಚಾರಕ್ಕೆ ಭಾರಿ ಟ್ರಾಫಿಕ್ ಸಮಸ್ಯೆ ಹಾಗು ಇನ್ನಿತರ ಸಮಸ್ಯೆಗಳು ಎದುರಾಗುತ್ತಿದ್ದರಿಂದ, ಗಿರೀಶ್ ತಳವಾರ ರವರು ತಮ್ಮ ತಂಡದೊಂದಿಗೆ, ಪೊಲೀಸರ ಸಹಾಯೊಂದಿಗೆ ಅಲ್ಲಿರುವ ಸುಮಾರು 12 ರಿಂದ 15 ಅನಧಿಕೃತ ಡಬ್ಬಾ ಅಂಗಡಿಗಳನ್ನು ತೆರವು ಮಾಡಿಸಿದರು.

ಈ ಪಾಲಿಕೆ ಕಾರ್ಯಕ್ಕೆ ವಾಹನ ಸಂಚಾರರು ಸಂತೋಷ ವ್ಯಕ್ತಪಡಿಸಿ ಶ್ಲಾಘಿಸಿದರು.ಈ ಕಾರ್ಯಾಚರಣೆಯಲ್ಲಿ ವಲಯ ಕಚೇರಿ 5ರ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಜು ಕೋಲಗೊಂಡ ಹಾಗೂ ಎಲ್ಲಾ ಕಿರಿಯ ಆರೋಗ್ಯ ನಿರೀಕ್ಷಕರು, ಜಮಾದಾರ್, ಸೂಪರ್ವೈಸರ್ ಮತ್ತು ಪೌರಕಾರ್ಮಿಕರು ಉಪಸ್ಥಿರಿದ್ದರು.

Ad
Ad
Nk Channel Final 21 09 2023
Ad