ಧಾರವಾಡ: ಬೈಕ್‌ಗೆ ಹಿಂದಿನಿಂದ ಬಂದ ಬೊಲೆರೊ ವಾಹನವೊಂದು ಗುದ್ದಿದೆ. ಗುದ್ದಿದ ರಭಸಕ್ಕೆ ಬೈಕ್‌ನಿಂದ ಹಾರಿ ಪಕ್ಕದ ರಸ್ತೆ ಬಿದ್ದ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡದ ವಿಶ್ವಕರ್ಮ ಸರ್ಕಲ್‌ನಲ್ಲಿ ನಡೆದಿದೆ.
ಧಾರವಾಡದ ಮದಿಹಾಳ ಬಡಾವಣೆ ನಿವಾಸಿ ರೋಹಿತ್ ಜಗದೀಶ ಕುಂಬಾರ (20), ಮೃತ ದುರ್ದೈವಿ. ಅಪಾಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೇಗವಾಗಿ ಬಂದ ಬೊಲೆರೋ ಹಿಂದಿನಿಂದ ಗುದ್ದಿದೆ.
ಡಿಕ್ಕಿ ರಭಸಕ್ಕೆ ರೋಹಿತ್ 10 ಅಡಿ ದೂರ ಹೋಗಿ ಬಿದ್ದಿದ್ದ. ಈ ವೇಳೆ ಹೆಲ್ಮೆಟ್ ಹಾಕಿಕೊಂಡಿದ್ದರೂ ಪ್ರಾಣ ಪಕ್ಷಿ ಹಾರಿಹೋಗಿದೆ. ಧಾರವಾಡ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
Ad