Ad

ಮಾವು ವಿಮಾ ಕಂತು ಪಾವತಿಸಲು ರೈತರಿಗೆ ಆಗಸ್ಟ್ 31 ಕೊನೆ ದಿನ

2024-25ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮಾವು ಬೆಳೆಗೆ ಕುಂದಗೋಳ ಹಾಗೂ ಸಂಶಿ ಹೋಬಳಿಗಳ ಗ್ರಾಮ ಪಂಚಾಯತಿಗಳನ್ನು ಮಾವು ಬೆಳೆ ವಿಮೆ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ.

ಕುಂದಗೋಳ: 2024-25ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮಾವು ಬೆಳೆಗೆ ಕುಂದಗೋಳ ಹಾಗೂ ಸಂಶಿ ಹೋಬಳಿಗಳ ಗ್ರಾಮ ಪಂಚಾಯತಿಗಳನ್ನು ಮಾವು ಬೆಳೆ ವಿಮೆ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ.

Ad
300x250 2

ಮಾವು ಪ್ರತಿ ಹೆಕ್ಟೇ‌ರ್ ಬೆಳೆಗೆ 4000 ರೂಪಾಯಿ ವಿಮೆ ಕಂತಿನ ಮೊತ್ತವನ್ನು ರೈತರು ಪಾವತಿಸಬೇಕಾಗಿರುತ್ತದೆ. ವಿಮಾ ಕಂತನ್ನು ಪಾವತಿಸಲು ಆಗಸ್ಟ್ 31 ಕೊನೆ ದಿನವಾಗಿರುತ್ತದೆ.

ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ರೈತರು ಫೂಟ್ಸ್ ಐಡಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಯೋಜನೆಯ ಸದುಪಯೋಗ ಪಡೆಯಲು ರೈತರು ಹತ್ತಿರದ ಬ್ಯಾಂಕ್‌ಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಕುಂದಗೋಳ ತಾಲೂಕಿನ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

Ad
Ad
Nk Channel Final 21 09 2023
Ad