Bengaluru 24°C
Ad

ಅಂಜಲಿ, ನೇಹಾ ರೀತಿಯಲ್ಲಿ ನಿನ್ನ ಕೊಲೆ: ಶಿಕ್ಷಕಿಯೊಬ್ಬರಿಗೆ ಬೆದರಿಕೆ ಪತ್ರ

ಅಂಜಲಿ ಹಾಗೂ ನೇಹಾ ಹಿರೇಮಠ ಕೊಲೆಯಾದ ರೀತಿಯಲ್ಲಿ ಸದ್ಯದಲ್ಲೇ ನಿನ್ನನ್ನು ಕೊಲೆ ಮಾಡುವುದಾಗಿ ಮುಖ್ಯ ಶಿಕ್ಷಕಿಯೊಬ್ಬರಿಗೆ ಬೆದರಿಕೆ ಪತ್ರವೊಂದು ಬಂದಿದೆ.

ಹುಬ್ಬಳ್ಳಿ: ಅಂಜಲಿ ಹಾಗೂ ನೇಹಾ ಹಿರೇಮಠ ಕೊಲೆಯಾದ ರೀತಿಯಲ್ಲಿ ಸದ್ಯದಲ್ಲೇ ನಿನ್ನನ್ನು ಕೊಲೆ ಮಾಡುವುದಾಗಿ ಮುಖ್ಯ ಶಿಕ್ಷಕಿಯೊಬ್ಬರಿಗೆ ಬೆದರಿಕೆ ಪತ್ರವೊಂದು ಬಂದಿದೆ.

ವೆಂಕಟೇಶ ಕಾಲೋನಿಯಲ್ಲಿ ವಾಸವಿರುವ ದೀಪಾ ಎಂಬುವರಿಗೆ ಮೇ 28ರಂದು ಪೋಸ್ಟ್ ಮುಖಾಂತರ ಬೆದರಿಕೆ ಪತ್ರವನ್ನು ಕಳುಹಿಸಲಾಗಿತ್ತು. ಹೀಗಾಗಿ ದೀಪಾ ಕುಟುಂಬದವರು ಆತಂಕದಲ್ಲಿಯೇ ಕೇಶ್ವಾಪುರ ಪೊಲೀಸ್‌ ಠಾಣೆಗೆ ಮಾಹಿತಿಯನ್ನು ನೀಡಿದ್ದರು. ಕೂಡಲೇ ಪ್ರಕರಣವನ್ನು ದಾಖಲು ಮಾಡಿಕೊಂಡ ಕೇಶ್ವಾಪುರ ಠಾಣೆಯ ಪೊಲೀಸರು ಆರೋಪಿಗಳ ಪತ್ತೆಗೆ ಜಾಲವನ್ನು ಬಿಸಿದ್ದಾರೆ.

ಈ ಮಾಹಿತಿ ತಿಳಿಯುತ್ತಿದ್ದ ಹಾಗೆ ಶಿಕ್ಷಕಿ ದೀಪಾ ಮನೆಗೆ ಡಿಸಿಪಿ ಕುಶಾಲ್ ಭೇಟಿ ನೀಡಿ ಮಾಹಿತಿಯನ್ನು ಕೇಳಿ ಪಡೆದಿದ್ದಾರೆ. ನಿಮ್ಮ ಜೊತೆ ನಮ್ಮ ಪೊಲೀಸ್ ಇಲಾಖೆ ಇರುತ್ತದೆ ನೀವು ಯಾವುದೇ ರೀತಿಯಿಂದ ಭಯ ಪಡುವ ಅಗತ್ಯವಿಲ್ಲ. ಬೆದರಿಕೆ ಹಾಕಿದ ಆರೋಪಿಗಳನ್ನು ಶೀಘ್ರವೇ ಬಂಧನ ಮಾಡುತ್ತೇವೆ ಅಂತ ಭರವಸೆ ನೀಡಿದ್ದಾರೆ.

Ad
Ad
Nk Channel Final 21 09 2023
Ad