ಕುಂದಗೋಳ : ಕರುವಿಗೆ ಜನ್ಮ ನೀಡಿ ರೋಗಕ್ಕೆ ತುತ್ತಾಗಿದ್ದ ತಾಯಿ ಆಕಳೊಂದು ಕಲ್ಯಾಣಪುರ ಬಸವಣ್ಣಜ್ಜನವರ ಆರ್ಶಿವಾದದಿಂದ ಆರೋಗ್ಯ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ರೈತ ಆಕಳು ಕರುವನ್ನೆ ಮಠಕ್ಕೆ ನೀಡಿದ ಘಟನೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ.
ಕುಂದಗೋಳ ತಾಲೂಕಿನ ಬಿಳೇಬಾಳ ಗ್ರಾಮದ ಮುಸ್ಲಿಂ ಭಕ್ತನೋರ್ವನ ಮನೆಯಲ್ಲಿನ ಆಕಳು ಕರುವಿಗೆ ಜನ್ಮ ನೀಡಿದ ಬಳಿಕ ರೋಗಕ್ಕೆ ತುತ್ತಾಗಿ ಮಗ್ಗಲು ಹಚ್ಚಿದೆ. ಈ ವೇಳೆ ಕಲ್ಯಾಣಪುರ ಬಸವಣ್ಣಜ್ಜನವರ ಪರಮ ಭಕ್ತನಾದ ಇಸ್ಮಾಯಿಲ್’ಸಾಬ್ ಕಿಲ್ಲೇದಾರ್ ಲಿಂಗೈಕ್ಯ ಬಸವಣ್ಣಜ್ಜನವರಲ್ಲಿ ನಮ್ಮ ಮನೆಯಲ್ಲಿನ ಆಕಳು ರೋಗದಿಂದ ಗುಣಮುಖವಾದರೇ ಅದರ ಹೊಟ್ಟೆಯಲ್ಲಿ ಜನಿಸಿದ ಕರುವನ್ನು ಮಠಕ್ಕೆ ನೀಡುವೆ ಎಂದಿದ್ದರು.
Ad