ದಾವಣಗೆರೆ: ತನ್ನ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಲು ವ್ಯಕ್ತಿಯೊಬ್ಬನಿಗೆ ಸಹಕರಿಸಿ ದರೋಡೆಯ ಕತೆ ಕಟ್ಟಿದ್ದ ಯುವತಿ ಸೇರಿದಂತೆ ಇಬ್ಬರನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ತಸ್ಮೀಯಖಾನಂ ಹಾಗೂ ಮುಜೀಬುಲ್ಲಾ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಸುಮಾರು 10.77 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚನ್ನಗಿರಿ ತಾಲೂಕಿನ ಅಗರಬನ್ನಿಹಟ್ಟಿ ಗ್ರಾಮದ ಅಮಾನುಲ್ಲಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು.
ಅಮಾನುಲ್ಲಾ ಅವರ ಪುತ್ರಿ ತಸ್ಮೀಯಖಾನಂ ಮನೆಯಲ್ಲಿ ಒಬ್ಬಳೇ ಇದ್ದಾಗ ಈ ಘಟನೆ ನಡೆದಿತ್ತು. ಒಂಟಿಯಾಗಿದ್ದಾಗ ನೀರು ಹಾಕಿ ಪ್ರಜ್ಞೆ ತಪ್ಪಿಸಿ, ಕಳ್ಳತನ ಮಾಡಿದ್ದಾರೆ ಎಂದು ಯುವತಿ ಕತೆ ಕಟ್ಟಿದ್ದಳು. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಾಗ ಸತ್ಯಾಂಶ ಬಯಲಿಗೆ ಬಂದಿತ್ತು. ತನಿಖೆ ನಡೆಸಿದ ತಂಡಕ್ಕೆ ಎಸ್‍ಪಿ ಉಮಾ ಪ್ರಶಾಂತ್ ಬಹುಮಾನ ಘೋಷಿಸಿದ್ದಾರೆ.
Ad