Bengaluru 28°C
Ad

ಕಾರು ಅಡ್ಡಗಟ್ಟಿ 17.24 ಲಕ್ಷ ದರೋಡೆ ಪ್ರಕರಣ : 7 ಆರೋಪಿ ಬಂಧನ

ಚನ್ನಗಿರಿಯ ಜೋಳದಾಳ ಬಳಿ ಕಳೆದ ಸೆ.3ರಂದು ಅಡಿಕೆ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ 17.24 ಲಕ್ಷ ರೂಪಾಯಿ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, 7 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ದಾವಣಗೆರೆ : ಚನ್ನಗಿರಿಯ ಜೋಳದಾಳ ಬಳಿ ಕಳೆದ ಸೆ.3ರಂದು ಅಡಿಕೆ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ 17.24 ಲಕ್ಷ ರೂಪಾಯಿ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, 7 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಬಂಧಿತರು ಉಮರ್ ಫಾರೂಕ್ (21), ಮಹಮದ್ ಇನಾಯತ್ (21), ಮೈಸೂರ ನಿವಾಸಿಗಳಾದ ಖುರಂ ಖಾನ್ (25), ಶಾಹಿದ್ ಖಾಜಿ (24), ಸೈಯದ್ ಸೈಫುಲ್ಲಾ (24), ಖಾಷಿಫ್ ಅಹಮದ್(25), ತುಮಕೂರು ನಿವಾಸಿ ಖುರಂ ಖಾನ್ (25) ಎಂದು ತಿಳಿದುಬಂದಿದೆ. ಬಂಧಿತರಿಂದ 2 ಕಾರು, 7.37 ಲಕ್ಷ ರೂಪಾಯಿ ನಗದು, 2 ಬೈಕ್ , 9 ಮೊಬೈಲ್ ಫೋನ್​​​​​ಗಳನ್ನು ಜಪ್ತಿ ಮಾಡಿದ್ದಾರೆ.

ದರೋಡೆಗೆ ಒಳಗಾಗಿದ್ದ ಅಶೋಕ್ ಎಂಬುವವರು ಕೃತ್ಯ ನಡೆದ ಬಗ್ಗೆ ಸಂತೆಬೆನ್ನೂರು ಪೊಲೀಸರಿಗೆ ದೂರು ನೀಡಿದ್ದರು. ಅಡಿಕೆ ಕೊಡಿಸುವ ಮಧ್ಯಸ್ಥಿಕೆವಹಿಸಿದ್ದ ಮಹಮದ್ ಇನಾಯತುಲ್ಲಾ ಎಂಬಾತನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Ad
Ad
Nk Channel Final 21 09 2023