ಚಿತ್ರದುರ್ಗ: ಹಿಂದೂ ಧರ್ಮ ಎಂಬುದು ಎಲ್ಲ ಅನಿಷ್ಟ, ಅನಾಚಾರಗಳಿಂದ ಕೂಡಿದ್ದು. ಲಿಂಗಾಯತರು ಆ ಧರ್ಮದ ಭಾಗವಲ್ಲ. ಲಿಂಗಾಯತವೇ ಬೇರೆ ಧರ್ಮ ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದ್ದಾರೆ.
ಹೊಳಲ್ಕೆರೆಯಲ್ಲಿ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯವರ 30ನೇ ಸ್ಮರಣಾರ್ಥ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ವೇದಿಕೆಯಿಂದ ಈ ಹೇಳಿಕೆ ನೀಡಿದರು. ಲಿಂಗಾಯತ ಧರ್ಮವನ್ನು ಹೊಗಳುವ ಭರದಲ್ಲಿ ಹಿಂದೂ ಧರ್ಮದ ಬಗ್ಗೆ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಲಿಂಗಾಯತ ಧರ್ಮ, ಹಿಂದೂ ಧರ್ಮದ ಒಂದು ಭಾಗ ಅಲ್ಲ. ಹಿಂದೂ ಧರ್ಮ ಅಂದ್ರೆ ಎಲ್ಲ ರೀತಿಯ ಅನಿಷ್ಟ ಅನಾಚಾರ ಒಳಗೊಂಡಿರುವಂಥದ್ದು. ಹಿಂದೂ ಒಂದರ್ಥದಲ್ಲಿ ಧರ್ಮವೇ ಅಲ್ಲ. ಸಿಂಧೂ ನದಿ ದಡದಿಂದ ಈಚೆಗಿನವರು ಧೂ ದೇಶದವರು ಎಂಬ ಅರ್ಥದಲ್ಲಿ ಹಿಂದೂ ಅನ್ನೋದಾದ್ರೆ, ಹಿಂದೂ ಒಂದು ಧರ್ಮ ಎಂದಾದ್ರೆ ನಾವು ಹಿಂದೂ ಧರ್ಮದವರಲ್ಲ. ನಾವು ಸ್ವತಂತ್ರ ಲಿಂಗಾಯತ ಧರ್ಮದವರು ಎಂದು ಅವರು ನುಡಿದರು.
Ad