Ad

ಚಾರ್ಮಡಿ ಘಾಟ್ ನಲ್ಲಿ ಬಸ್ ಗೆ ಅಡ್ಡ ನಿಂತ ಒಂಟಿ ಸಲಗ: ಅರ್ಧಗಂಟೆ ಕಳೆದರೂ ದಾರಿ ಬಿಡದ ಆನೆ

Ghat

ಚಿಕ್ಕಮಗಳೂರು: ಚಾರ್ಮಡಿ ಘಾಟ್ ನಲ್ಲಿ ಕಡಾನೆಗಳ ಹಾವಳಿ ಹೆಚ್ಚಾಗಿದೆ. ಸರ್ಕಾರಿ ಬಸ್ ಗೆ ಅಡ್ಡಲಾಗಿ ಬಂದು ನಿಂತ ಒಂಟಿ ಸಲಗವೊಂದು ಬಸ್ ಗೆ ದಾರಿ ಬಿಡದೇ ಸತಾಯಿಸಿರುವ ಘಟನೆ ನಡೆದಿದೆ.

Ad
300x250 2

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾ| ಚಾರ್ಮಡಿ ಘಟಿಯ 7ನೇ ಮತ್ತು 8ನೇ ತಿರುವಿನಲ್ಲಿ ಕಾಡಾನೆಯೊಂದು ಏಕಾಏಕಿ ಬಸ್ ಗೆ ಅಡ್ಡ ಬಂದು ನಿಂತಿದೆ.

ಅರ್ಧಗಂಟೆ ಕಳೆದರೂ ರಸ್ತೆ ಬಿಡದೇ ನಿಂತುಕೊಂಡಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಕೆಳಗೆ ಇಳಿಯಲಾಗದೇ ಕಂಗಾಲಾಗಿದ್ದಾರೆ. ಬಸ್ ಚಾಲಕ ಕೂಡ ಬೇರೆ ದಾರಿ ಇಲ್ಲದೇ ಬಸ್ ನಿಲ್ಲಿಸಿಕೊಂಡು ಆನೆ ದಾರಿ ಬಿಡುವವರೆಗೂ ಕಾದು ಕುಳಿತಿದ್ದಾರೆ.

ಪರಿಣಾಮ ಚಾರ್ಮಡಿಘಾಟ್ ನಲ್ಲಿ ಎರಡು ಕಿ.ಮೀನಷ್ಟು ಟ್ರಾಫಿಕ್ ಜಾಮ್ ಸಂಭವಿಸಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ. ಅರ್ಧ ಗಂಟೆ ಬಳಿಕ ಆನೆ ದಾರಿ ಬಿಟ್ಟು ಕಾಡಿನತ್ತ ತೆರಳಿದೆ. ಸದ್ಯ ಆನೆ ದಾರಿ ಬಿಟ್ಟಿತಲ್ಲವೆಂದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

Ad
Ad
Nk Channel Final 21 09 2023
Ad