ಚಿಕ್ಕಮಗಳೂರು: ಮುಸ್ಲಿಂ ಸಂಘಟನೆಗಳು ದತ್ತಪೀಠದಲ್ಲಿ ಮತ್ತೆರಡು ಹೊಸ ಸಂಪ್ರಾದಯವನ್ನ ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದು ದತ್ತಪೀಠದಲ್ಲಿ ಡ್ರೆಸ್ ಕೋಡ್ ಜಾರಿಗೆ ತರೋದ್ರ ಜೊತೆ ರಸ್ತೆಯುದ್ಧಕ್ಕೂ ಇರುವ ದತ್ತಪೀಠ ನಾಮಫಲಕಗಳ ಬದಲಾಗಿ ಗೆಜೆಟೆಡ್ ದಾಖಲೆಯಂತೆ ಇನಾಂ ದತ್ರಾತ್ರೇಯ ಬಾಡಾಬುಡನ್ ಸ್ವಾಮಿ ದರ್ಗಾ ಎಂದು ಬದಲಿಸಬೇಕು. ಅಲ್ಲಿ ದರ್ಗಾವೇ ಮಾಯವಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರುವ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತೆಯ ಕೇಂದ್ರ ಚಿಕ್ಕಮಗಳೂರು ತಾಲೂಕಿನ ದತ್ತಪೀಠಕ್ಕೆ ವರ್ಷಪೂರ್ತಿ ಪ್ರವಾಸಿಗರು ಬರ್ತಾರೆ. ನಿರ್ಬಂಧ ಹೊರತುಪಡಿಸಿ ದತ್ತಪೀಠಕ್ಕೆ ಪ್ರವಾಸಿಗರಿಲ್ಲದ ದಿನವೇ ಇಲ್ಲ. ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯೋಕೆ ಬರೋರು-ಭಕ್ತಿ-ಭಾವದಿಂದ ಬರೋರು ಇಬ್ಬರು ಸಮನಾಗಿದ್ದಾರೆ. ಆದರೆ, ದತ್ತಪೀಠದಲ್ಲಿ ಡ್ರೆಸ್ ಕೋಡ್ ಜಾರಿಗೆ ತನ್ನಿ ಎಂದು ಸಯೈದ್ ಬುಡೇನ್ ಶಾ ಖಾದ್ರಿ ವಂಶಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
Ad