Ad

ನೇರಳೆ ಹಣ್ಣನ್ನು ಕೀಳಲು ಹೋಗಿ ಮರದಿಂದ ಬಿದ್ದು ಓರ್ವ ಬಾಲಕ ಮೃತ್ಯು

ನೇರಳೆ ಹಣ್ಣಿನ ಮರ ಹತ್ತಿದ ಬಾಲಕ ದುರಂತ ಅಂತ್ಯ ಕಂಡಿರುವ ಘಟನೆ ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ನಡೆದಿದೆ.

ಚಿಕ್ಕಮಗಳೂರು: ನೇರಳೆ ಹಣ್ಣಿನ ಮರ ಹತ್ತಿದ ಬಾಲಕ ದುರಂತ ಅಂತ್ಯ ಕಂಡಿರುವ ಘಟನೆ ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ನಡೆದಿದೆ.

Ad
300x250 2

ಆಕಾಶ್ (13) ಮೃತ ದುರ್ದೈವಿ. 7ನೇ ತರಗತಿ ಆಕಾಶ್​ ತನ್ನ ಮೂವರು ಸ್ನೇಹಿತರನ್ನು ಕರೆದುಕೊಂಡು ನೇರಳೆ ಹಣ್ಣು ಕೀಳಲು ಹೋಗಿದ್ದಾರೆ. ಮೂವರು ನೇರಳೆ ಮರ ಹತ್ತಿ ಹಣ್ಣು ಕಿತ್ತಿದ್ದಾರೆ. ಹಣ್ಣು ಕೀಳುವಾಗ ಆಕಾಶ್​ ಆಯ ತಪ್ಪಿ ಮರದಿಂದ ಕೆಳಗೆ ಬೀಳುವಾಗ ವಿದ್ಯುತ್ ತಂತಿ ಹಿಡಿದಿದ್ದಾನೆ. ಈ ವೇಳೆ ವಿದ್ಯುತ್​ ಶಾಕ್​ ಹೊಡೆದಿದೆ. ಆಕಾಶ್​ ಪ್ರಜ್ಞಾಹೀನನಾಗಿದ್ದಾನೆ.

ಇದ​​ನ್ನು ಕಂಡು ಗಾಬರಿಗೊಂಡ ಆಕಾಶ್​ ಸ್ನೇಹಿತರು ಈ ವಿಚಾರವನ್ನು ಆತನ ಪೋಷಕರಿಗೆ ತಿಳಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೋಷಕರು ಆಕಾಶ್​​ನನ್ನು ಕೂಡಲೆ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವಿಧಿಯಾಟ ಚಿಕಿತ್ಸೆ ಫಲಿಸದೆ ಆಕಾಶ್​ ಮೃತಪಟ್ಟಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad
Ad
Nk Channel Final 21 09 2023
Ad