Bengaluru 22°C
Ad

ತಿರುಪತಿಯಿಂದ ವಾಪಸ್ ಬರುತ್ತಿದ್ದ ವೇಳೆ ಅಪಘಾತ: ಮೂವರು ಮೃತ್ಯು

ಕಾರಿನ ಮೇಲೆ ಲಾರಿ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಬಳಿಯ ತಿರುಪತಿ-ಅನಂತಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ: ಕಾರಿನ ಮೇಲೆ ಲಾರಿ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಬಳಿಯ ತಿರುಪತಿ-ಅನಂತಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ.

ತಿರುಪತಿಯಿಂದ ವಾಪಸ್ ಬರುತ್ತಿದ್ದ ಕಾರಿನ ಮೇಲೆ ಲಾರಿ ಉರುಳಿ ಬಿದ್ದು ಕಾರು ಸಂಪೂರ್ಣ ಜಖಂ ಆಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಹೆಚ್ ಜಿ ಮುನಿವೆಂಕಟರೆಡ್ಡಿ (55), ಹೆಚ್.ಕೆ.ಮಂಜುನಾಥ್ (38), ಹಾಗೂ ರಮೇಶ್ (34) ಮೃತ ದುರ್ದೈವಿಗಳು.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಚಿಕ್ಕಬಳ್ಳಾಪುರಕ್ಕೆ ವಾಪಸ್ ಬರುವ ವೇಳೆ ಅಪಘಾತ ನಡೆದಿದೆ. ಮೃತರೆಲ್ಲರೂ ಒಂದೇ ಕುಟುಂಬಸ್ಥರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ತೇಜಸ್ ಎನ್ನುವವರಿಗೆ ಗಂಭೀರ ಗಾಯಗಳಾಗಿವೆ. ಎರಡು ಕಾರುಗಳಲ್ಲಿ ಗುರುವಾರ ಸಂಜೆ ತಿರುಪತಿಗೆ ಹೋಗಿದ್ದರು. ಮೃತರೆಲ್ಲರೂ ಚಿಕ್ಕಬಳ್ಳಾಪುರ ತಾಲ್ಲೂಕಿನ ಹರಿಸ್ಥಳ ಹಾಗೂ ಗೊಲ್ಲಚೆನ್ನೇನಹಳ್ಳಿ ಗ್ರಾಮದರು ಎನ್ನಲಾಗಿದೆ.

Ad
Ad
Nk Channel Final 21 09 2023