ಚಿಕ್ಕಬಳ್ಳಾಪುರ : ಟಾಟಾ ಸುಮೋ, ಲಾರಿ ನಡುವೆ ಭೀಕರ ಅಪಘಾತವಾಗಿ ಮೂವರು ಸಾವನ್ನಪ್ಪಿದ ಘಟನೆ ಇಂದು ಚಿಕ್ಕಬಳ್ಳಾಪುರ ತಾಲೂಕಿನ ಸೆಟ್ ದಿನ್ನೇ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ರಾಜೀಯಾ ಶಾಹಿನ್(50) ಹಾಗೂ ಮೇಹಿಮುದುಲ್ (43), ಮ್ಲೋಲ್ಲಾನಾ ಶಾಹನ್ ಎಂದು ಗುರುತಿಸಲಾಗಿದ್ದು, ಇನ್ನು ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಆಸ್ಪತ್ರೆಗೆ ಸಅಗಿಸುವ ಮಾರ್ಗ ಮಧ್ಯೆ ಮೂವರು ಸಾವನ್ನಪ್ಪಿದ್ದಾರೆ.
ಕೋಲಾರದಿಂದ ಟಾಟಾ ಸುಮೋ ಕಾರಿನಲ್ಲಿ ಇಂದು ಪೆನುಗೊಂಡ ದರ್ಗಾಗೆ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ, ಲಾರಿಯನ್ನು ಓವರ್ಟೇಕ್ ಮಾಡಲು ಹೋದ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿರುವ ಶಂಕೆ ಇದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದಲ್ಲಿ ಮೃತಪಟ್ಟವರು ಬಿಹಾರ ಮೂಲದವರು ಎಂದು ತಿಳಿದುಬಂದಿದ್ದು, ಕೋಲಾರದ ದರ್ಗಾದಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಕುಟುಂಬ ಸಮೇತ ಪೆನುಗೊಂಡ ಕಡೆಗೆ ತೆರಳುತ್ತಿದ್ದಾಗ ಈ ದುರಂತ ನಡೆದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.