Ad

ತಾಯಿಯ ಅಕಾಲಿಕ ಸಾವಿನ ಬೇಸರ; ಆತ್ಮಹತ್ಯೆಗೆ ಶರಣಾದ ಅಕ್ಕ-ತಮ್ಮ

Dead

ಚಿಕ್ಕಬಳ್ಳಾಪುರ: ತಾಯಿಯ ಅಕಾಲಿಕ ಸಾವಿನ ಬೇಸರದಲ್ಲಿ ರೈಲಿಗೆ ಸಿಲುಕಿ ಅಕ್ಕ ತಮ್ಮ ಇಬ್ಬರು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಶಿಡ್ಲಘಟ್ಟದಲ್ಲಿ ನಡೆದಿದೆ. ಇಲ್ಲಿನ ಪ್ರೇಮನಗರ ನವ್ಯ ಅಲಿಯಾಸ್ ಶಿಲ್ಪ (25) ಮತ್ತು ಪ್ರಭು(23) ಮೃತರು. ಶಿಡ್ಲಘಟ್ಟದ ಮಾರ್ಗವಾಗಿ ಬೆಂಗಳೂರಿನಿಂದ ಕೋಲಾರಕ್ಕೆ ತೆರಳುವ ರೈಲಿಗೆ ಹಳಿ ಮೇಲೆ ಇಬ್ಬರು ಮಲಗಿ ಪ್ರಾಣ ಕಳೆದುಕೊಂಡಿದ್ದಾರೆ.

ಇತ್ತೀಚೆಗೆ ನವ್ಯ ಮತ್ತು ಪ್ರಭುವಿನ ತಾಯಿ ಲಲಿತಮ್ಮ ಧೀರ್ಘಕಾಲ ಸಮಸ್ಯೆ ಪರಿಹಾರಕ್ಕೆ ಆಗ್ಗಿಂದಾಗ್ಗೆ ಮಕ್ಕಳೊಂದಿಗೆ ಮುರುಗಮಲ್ಲಾ ದರ್ಗಾಗೆ ಹೋಗಿ ಒಮ್ಮೊಮ್ಮೆ ತಿಂಗಳಾನುಗಟ್ಟಲೇ ಅಲ್ಲೇ ಇದ್ದು ಬಿಡುತ್ತಿದ್ದರು. ಇದರ ನಡುವೆ ಅನಾರೋಗ್ಯ ಕಾರಣದಿಂದ ಮೃತಪಟ್ಟಿದ್ದು ತಾಯಿ ಸಾವಿನಿಂದ ಇಬ್ಬರು ಖಿನ್ನತೆಗೊಳಗಾಗಿದ್ದರು.

ಇನ್ನೂ ಗುರುವಾರ ಮಧ್ಯಾಹ್ನ ಈ ಇಬ್ಬರೂ ರೈಲು ಹಳಿ ಬಳಿ ಅಡ್ಡಾಡುವುದನ್ನು ಸ್ಥಳೀಯರು ಕಂಡಿದ್ದರು. ಅವರ ಮನೆಯೂ ಸಮೀಪದಲ್ಲೇ ಸ್ಥಳ ಇರುವ ಕಾರಣ ಯಾರಿಗೂ ಅನುಮಾನ ಬಂದಿಲ್ಲ. ರಾತ್ರಿ ಸಾಕಷ್ಟು ಸಮಯವಾದರೂ ಮನೆಗೆ ಬಾರದ್ದರಿಂದ ಗಾಬರಿಯಾದ ಮೃತರ ತಂದೆ ನಟರಾಜ್ ಮಾರನೇಯ ದಿನ ಸುತ್ತ ಮುತ್ತ ಹುಡುಕಾಡಿದ್ದು ಮೊದಲು ಮುರುಗಮಲ್ಲಕ್ಕೆ ಹೋಗಿರಬಹುದೆಂದು ಶಂಕಿಸಿ, ಅಲ್ಲಿಗೂ ಹೋಗಿ ಬಂದಿದ್ದಾರೆ.

ಲಲಿತಮ್ಮ ಮತ್ತು ನಟರಾಜ್‌ಗೆ ಮೂವರು ಮಕ್ಕಳಿದ್ದು ಮೊದಲನೆ ಪುತ್ರ ನವೀನ್ ಮರಗೆಲಸ ಮಾಡುತ್ತಿದ್ದು ನವ್ಯ ಮತ್ತು ಪ್ರಭು ಏನೂ ಕೆಲಸ ಮಾಡದೇ, ಶಾಲೆಗೂ ಸರಿಯಾಗಿ ಹೋಗದೇ ಹೆಚ್ಚು ಕಾಲ ತನ್ನ ತಾಯಿಯೊಂದಿಗೆ ಮನೆಯಲ್ಲಿಯೇ ಇರುತ್ತಿದ್ದರು. ಘಟನೆಯ ಸ್ಥಳಕ್ಕೆ ಶಿಡ್ಲಘಟ್ಟ ನಗರ ಠಾಣೆ ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad
Ad
Nk Channel Final 21 09 2023