Bengaluru 22°C
Ad

ಕಪ್ಪಾಗಿದ್ದಾಳೆಂದು ಗಂಡ ಅವಮಾನ: ನೊಂದು ನವವಿವಾಹಿತೆ ಆತ್ಮಹತ್ಯೆ

ಹೆಂಡತಿ ಕಪ್ಪಾಗಿದ್ದಾಳೆಂದು ಮದುವೆಯಾದಾಗಿನಿಂದಲೂ ಗಂಡ ಅವಮಾನ ಮಾಡುತ್ತಿದ್ದ ಕಾರಣದಿಂದ ಚಿಕ್ಕಬಳ್ಳಾಪುರದ ಚಿಂತಾಮಣಿಯ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 

ಚಿಕ್ಕಬಳ್ಳಾಪುರ: ಹೆಂಡತಿ ಕಪ್ಪಾಗಿದ್ದಾಳೆಂದು ಮದುವೆಯಾದಾಗಿನಿಂದಲೂ ಗಂಡ ಅವಮಾನ ಮಾಡುತ್ತಿದ್ದ ಕಾರಣದಿಂದ ಚಿಕ್ಕಬಳ್ಳಾಪುರದ ಚಿಂತಾಮಣಿಯ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮದುವೆಯಾದ 7 ತಿಂಗಳಲ್ಲೇ ಆ ಮಹಿಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.  ಬಿಂದುಶ್ರೀ ಎಂಬ 22 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಆಕೆಯ ಗಂಡ ರಾಘವೇಂದ್ರ ಹೆಚ್.ಎಂ., ಮಾವ ಎನ್.ಮುನಿರಾಜ, ಅತ್ತೆ ಲತಾ ಹಾಗೂ ನರಸಿಂಹಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ.

ಬಿಂದುಶ್ರೀ ಅವರ ಗಂಡ ರಾಘವೇಂದ್ರ ಸರ್ಕಾರಿ ಸೌಮ್ಯದ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.  ಬಿಂದುಶ್ರೀ ಕಪ್ಪಗಿದ್ದಾರೆ ಎಂದು ಆಕೆಯನ್ನು ಅವಮಾನಿಸಿ ವರದಕ್ಷಿಣಿ ಕಿರುಕುಳ ನೀಡಿರುವ ಆರೋಪ ಆಕೆಯ ಗಂಡನ ಮನೆಯವರ ಮೇಲೆ ಕೇಳಿಬಂದಿದೆ. 20 ಲಕ್ಷ ರೂಪಾಯಿ ಹಣ ಕೊಡುವಂತೆ ಕಿರುಕುಳ ಆರೋಪ ಕೇಳಿಬಂದಿದೆ.

ಬಿಂದುಶ್ರೀ ಮದುವೆಯಾಗಿ 7 ತಿಂಗಳಾಗಿತ್ತು. ಮದುವೆ ವೇಳೆ 60 ಗ್ರಾಂ ತೂಕದ ಚಿನ್ನದ ಆಭರಣವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮೊದಲ 2 ತಿಂಗಳು ಆಕೆಯ ಗಂಡನ ಮನೆಯಲ್ಲಿ ಚೆನ್ನಾಗಿ ನೋಡಿಕೊಂಡಿದ್ದರು. ನಂತರ ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಬರೆಯಲು ಮಗಳ ನಮ್ಮ ಮನೆಗೆ ಬಂದಾಗ ವಾಪಾಸ್ ತಮ್ಮ ಮನೆಗೆ ಬರುವಾಗ 20 ಲಕ್ಷ ರೂ. ಹಣ ತರುವಂತೆ ಆಕೆಯ ಮಾವ ಹೇಳಿ ಕಳುಹಿಸಿದ್ದರು. ಆಕೆ ಮನೆಗೆ ಹೋದಾಗ ವರದಕ್ಷಿಣೆ ತರಲಿಲ್ಲವೆಂದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಬಿಂದುಶ್ರೀ ತವರು ಮನೆಯವರು ದೂರು ನೀಡಿದ್ದಾರೆ.

ಬಿಂದುಶ್ರೀಯ ಗಂಡ ರಾಘವೇಂದ್ರಗೆ ಮದುವೆ ಸಂದರ್ಭದಲ್ಲಿ 60 ಗ್ರಾಂ ಬಂಗಾರದ ಚಿನ್ನಾಭರಣಗಳನ್ನು ನೀಡಲಾಗಿತ್ತು. 60 ಗ್ರಾಂ ಬದಲು 100 ಗ್ರಾಂ. ಚಿನ್ನಾಭರಣ ಕೊಡಬೇಕಿತ್ತೆಂದು ಪದೇಪದೇ ಗಲಾಟೆ ಮಾಡುತ್ತಿದ್ದ. ಚಿಂತಾಮಣಿಯಿಂದ ಹೊಸಕೋಟೆ ತಾಲ್ಲೂಕಿನ ಹಿರಂಡಹಳ್ಳಿ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಾಮಣಿ ನಗರಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.

 

Ad
Ad
Nk Channel Final 21 09 2023