Bengaluru 28°C
Ad

ರಸ್ತೆಯ ಜಾಗದ ವಿಚಾರಕ್ಕೆ ಜಗಳ: ಮನನೊಂದು ಬಾಲಕ ಆತ್ಮಹತ್ಯೆ

ಅಕ್ಕ ಪಕ್ಕದ ಮನೆಯ ನಿವಾಸಿಗಳಿಂದ ವಿವಾದಿತ ರಸ್ತೆಯ ಜಾಗದ ವಿಚಾರವಾಗಿ ನಡೆದ ಜಗಳದಿಂದ ಮನನೊಂದು ಬಾಲಕನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕವರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಅಕ್ಕ ಪಕ್ಕದ ಮನೆಯ ನಿವಾಸಿಗಳಿಂದ ವಿವಾದಿತ ರಸ್ತೆಯ ಜಾಗದ ವಿಚಾರವಾಗಿ ನಡೆದ ಜಗಳದಿಂದ ಮನನೊಂದು ಬಾಲಕನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕವರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್ ಹಾಗೂ ಪುಷ್ಪ ದಂಪತಿಯ ಮಗ ಸುದೀಪ್ (16) ಆತ್ಮಹತ್ಯೆಗೆ ಶರಣಾದ ಬಾಲಕ. ಶುಕ್ರವಾರ ಸಂಜೆ ಗ್ರಾಮದ ರಾಮಯ್ಯ-ಲಕ್ಷ್ಮಮ್ಮ ದಂಪತಿ, ಲಕ್ಷಯ್ಯ-ಆಶಮ್ಮ ದಂಪತಿ ಎಲ್ಲರೂ ಸೇರಿ ಬಾಲಕ ಸುದೀಪ್ ಮತ್ತು ಆತನ ತಂಗಿ ಮೇಲೆ ಹಲ್ಲೆ ನಡೆಸಿದ್ದಾರೆ. ವಿವಾದಿತ ರಸ್ತೆಯಲ್ಲಿ ಓಡಾಡಿದ ಕಾರಣ ಜಗಳ ಮಾಡಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ವೇಳೆ ಕೋಪಗೊಂಡ ಬಾಲಕ ಇಟ್ಟಿಗೆ ತೆಗೆದುಕೊಂಡು ಎಸೆದಿದ್ದು ರಾಮಯ್ಯ ಗಾಯಗೊಂಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಾಲಕ ಹಾಗೂ ಆತನ ತಂದೆ ವಿರುದ್ಧ ದೂರು ನೀಡಿದ್ದರು. ಜೈಲಿಗೆ ಹಾಕಿಸುವವರೆಗೂ ಬಿಡುವುದಿಲ್ಲ ಎಂದು ಎರಡೂ ಕುಟುಂಬದವರು ಬೆದರಿಕೆ ಹಾಕಿದ್ದರು.

ಇದರಿಂದ ಹೆದರಿದ ಬಾಲಕ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ನಂತರ ಆಶಮ್ಮ ಹಾಗೂ ಲಕ್ಷ್ಮಮ್ಮನ ಕುಟುಂಬಸ್ಥರು ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Ad
Ad
Nk Channel Final 21 09 2023