ಚಾಮರಾಜನಗರ: ಕೇರಳದ ವಯನಾಡಿನ ಚೂರಲ್ಮಲಾದಲ್ಲಿ ನಡೆದ ಭೂಕುಸಿತದಿಂದ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಹಸುಗಳ ಪೈಕಿ 9 ಹಸುಗಳು ವಾಪಸ್ ಬಂದಿವೆ. ಜು.29ರ ಮಧ್ಯರಾತ್ರಿಯ ಬಳಿಕ ಚೂರಲ್ಮಲಾದಲ್ಲಿ ನಡೆದ ಭೂಕುಸಿತ ಪ್ರವಾಹದಲ್ಲಿ ಚಾಮರಾಜನಗರ ಜಿಲ್ಲೆ ಮೂಲದ ವಿನೋದ್ ಮತ್ತು ಜಯಶ್ರೀ ಅವರ ಕುಟುಂಬದ 20 ಹಸುಗಳು ಕೊಚ್ಚಿಕೊಂಡು ಹೋಗಿದ್ದವು.
ಚಾಮರಾಜನಗರ ಟೀ ಎಸ್ಟೇಟ್‌ನಲ್ಲಿ 9 ಹಸುಗಳು ಕಾಣಿಸಿಕೊಂಡಿವೆ ಅದರ ಮಾಲೀಕರಾದ ವಿನೋದ್ ಸ್ಥಳಕ್ಕೆ ಹೋಗಿ ನೋಡಿ ತಮ್ಮ ಹಸುಗಳು ಎಂದು ಖಚಿತಪಡಿಸಿದ್ದಾರೆ. ಉಳಿದ ಹಸುಗಳು ಎಲ್ಲಿವೆ ಎಂಬುದು ಗೊತ್ತಾಗಿಲ್ಲ. ಅವುಗಳೂ ಮರಳಿ ಬರಬಹುದು ಎಂಬ ಆಶಾವಾದ ಕುಟುಂಬದಲ್ಲಿದೆ.
Ad