ಚಾಮರಾಜನಗರ: ತಾಲ್ಲೂಕಿನ ಗೂಳಿಪುರ ಗ್ರಾಮದಲ್ಲಿ ಜಗನ್ಮಾತೆ ಉರುಕತ್ತಮ್ಮ ನವರ ಮೂರನೇ ವರ್ಷದ ವಾರ್ಷಿಕೋತ್ಸವ ಭಕ್ತಿ ಸಡಗರದೊಂದಿಗೆ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ಉರುಕತ್ತಮ್ಮ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಹೋಮ ಹವನ ನೆರವೇರಿಸಿ ಮಹಾಮಂಗಳಾರತಿ ಮಾಡಲಾಯಿತು.
ಗ್ರಾಮದ ಎಲ್ಲ ಭಕ್ತರು ಭಾಗವಹಿಸಿ ತಾಯಿ ಉರುಕತ್ತೆಶ್ವರಿ ಅಮ್ಮನವರ ಕೃಪೆಗೆ ಪಾತ್ರರಾದರು. ಪೂಜೆಯ ನಂತರ ಎಲ್ಲರಿಗೂ ಅನ್ನಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಮ್ಮಡಿ ನಾಗರಾಜು, ಪುಟ್ಟಸ್ವಾಮಿ, ಯಜಮಾನ್ರು ದೊರೆಸ್ವಾಮಿನಾಯಕ, ಅಂಗಡಿ ಮಹಾದೇವನಾಯಕ, ರಂಗಸ್ವಾಮಿ,ನಾಗೇಶ್ ಮುಖಂಡರಾದ ರವೀಶ್, ಹೋಟೆಲ್ ನಾಗಣ್ಣ,ಬಿಳಿಗಿರಿರಂಗನಾಯಕ, ರಾಚನಾಯಕ, ಮಾದೇಶ್ ಕುಮಾರ್, ಗುರುಲಿಂಗ, ಚಾಮುಂಡಿ, ಸೋಮು, ಬಿಳಿಗಿರಿ,ಕಡ್ಡಾ, ಶಿವಕುಮಾರ್,ನಂಜುಂಡಸ್ವಾಮಿ,ರಾಮು, ಶ್ರೀನಿವಾಸ್, ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.